ಮಾಣಿ ಗ್ರಾಮ ಪಂಚಾಯತ್ ಜಮಾಬಂಧಿ

ಬಂಟ್ವಾಳ, ಆ. 19: ಮಾಣಿ ಗ್ರಾಮ ಪಂಚಾಯತ್‌ನ 2015-16ನೆ ಸಾಲಿನ ಜಮಾಬಂದಿ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಮಾಣಿ ಗ್ರಾಮ ಪಂಚಾಯತ್ ಸಬಾಂಗಣದಲ್ಲಿ ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.
ನೋಡೆಲ್ ಅಧಿಕಾರಿಯಾಗಿದ್ದ ಬಂಟ್ವಾಳ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಂ.ಜಯಣ್ಣ ಜಮಾಬಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಬೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಂಪಾವತಿ, ಬಂಟ್ವಾಳ ಹಿಂದುಳಿದ ಕಲ್ಯಾಣ ಇಲಾಖೆಯ ನಿಲಯ ಪಾಲಕ ಶಿವಣ್ಣ, ವಿಟ್ಲ ಸಹಾಯಕ ಕೃಷಿ ಅಧಿಕಾರಿ ಇಜಾಝುದ್ದೀನ್, ಪಂ.ರಾ.ಇಂ. ಉಪವಿಬಾಗದ ಕಿರಿಯ ಎಂಜಿನಿಯರ್ ನಾಗೇಶ, ಮಾಣಿ ಗ್ರಾಮಕರಣೀಕ ವಿಜೇತ ಕೆ., ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಸ್ವಾಗತಿಸಿ, ವಂದಿಸಿದರು.
Next Story





