ನಿಧನ
![ನಿಧನ ನಿಧನ](https://www.varthabharati.in/sites/default/files/images/articles/2016/08/20/19uppseedikunji.jpg)
ಸೀದಿಕುಂಞಿ
ಉಪ್ಪಿನಂಗಡಿ, ಆ.19: ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ಸೀದಿಕುಂಞಿ(102) ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಅಸೌಖ್ಯದಿಂದಿದ್ದ ಅವರು ನಿಧನರಾದರು. ಮೃತರು ಪತ್ನಿ, ಪತ್ರಕರ್ತ ಶಂಸುದ್ದೀನ್ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಕುಂಜೂರುಪಂಜ ಮಸೀದಿಯಲ್ಲಿ ನಡೆಸಲಾಯಿತು.
Next Story