ನಾಳೆ ಜಿಎಸ್‌ಬಿ ಖೇಲ್ ಕಬಡ್ಡಿ ಟೂರ್ನಮೆಂಟ್
ಮಂಗಳೂರು, ಆ.19: ವೀಕೆಂಡ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಇದರ ಆಶ್ರಯದಲ್ಲಿ ‘ಜಿಎಸ್‌ಬಿ ಖೇಲ್ ಕಬಡ್ಡಿ- ಸೀಸನ್-1’ ಒಳಾಂಗಣ ಕಬಡ್ಡಿ ಪಂದ್ಯಕೂಟವು ನಗರದ ಭಾರತ್ ಮಾಲ್‌ನ ರೂಫ್‌ಟಾಪ್‌ನಲ್ಲಿ ಆ.21ರಂದು ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ವಿಜೇತರಿಗೆ ಕ್ರಮವಾಗಿ 7,777 ರೂ. ಹಾಗೂ 4,444 ರೂ. ಪುರಸ್ಕಾರದ ಜೊತೆಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
ಜಿಎಸ್‌ಬಿ ಸಮುದಾಯದ 22 ತಂಡಗಳು ಈ ಪಂದ್ಯಕೂಟದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರು ನೋಂದಾಯಿಸಿಕೊಂಡಿವೆ. ವಿವರಗಳಿಗೆ ದೂ.ಸಂ.: 7760188667, 9986868787ನ್ನು ಸಂಪರ್ಕಿಸಬಹುದೆಂದು ಒರಿಜಿನ್ ಡಿಸೈನೆಕ್ಸ್ಟ್‌ನ ಪ್ರಾಪ್ರೈಟರ್ ಕೊಂಚಾಡಿ ನರಸಿಂಹ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





