ಮೃತ ಅಳಿಯ ಹೆಸರಲ್ಲಿ ಪಾಸ್‌ಪೋರ್ಟ್‌ಗೆ ಯತ್ನಿಸಿದಾತನ ಬಂಧನ!

ಕಾಸರಗೋಡು, ಆಗಸ್ಟ್ 20: ಮೃತನಾದ ಅಳಿಯನ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಪಡೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉದುಮ ಪಳ್ಳಮ ತೆಕ್ಕೆಕರೆಯ ನಾರಾಯಣ(50)ಎಂಬಾತ ಪೊಲೀಸರ ಅತಿಥಿಯಾದ ವ್ಯಕ್ತಿಯಾಗಿದ್ದು ಅಳಿಯ ಕುಂಡಡ್ಕದ ಸುರೇಶ್ ಎಂಬಾತನ ಹೆಸರಿನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ. ಫೋಟೊ ನಾರಾಯಣನದ್ದಾಗಿದ್ದು ವಿಳಾಸ ಸುರೇಶನದ್ದು ನೀಡಲಾಗಿತ್ತು. ಇದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಪರಿಶೀಲನೆ ಸಮಯದಲ್ಲಿ ನಕಲಿ ಪಾಸ್‌ಪೋರ್ಟ್‌ಗೆ ಅರ್ಜಿಹಾಕಲಾಗಿದೆ ಎಂದು ಗೊತ್ತಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಹಿಂದೆ ವಿದ್ಯಾನಗರ್ ಪೊಲೀಸರು ಕೇಸು ದಾಖಲಿಸಿದ್ದರು. ನಂತರ ನಾರಾಯಣ ಭೂಗತನಾಗಿದ್ದ ಎನ್ನಲಾಗಿದ್ದು, ಶುಕ್ರವಾರ ಮಧ್ಯಾಹ್ನ ಪೊಲೀಸರ ಬಲೆಗೆ ಈತ ಬಿದ್ದಿದ್ದಾನೆ. ಕೋರ್ಟ್ ನಾರಾಯಣನಿಗೆ ರಿಮಾಂಡ್ ವಿಧಿಸಿದೆ ಎಂದು ತಿಳಿದು ಬಂದಿದೆ.
Next Story





