ಪುತ್ತೂರು: ಸಿಐಟಿಯು ವತಿಯಿಂದ ವಾಹನ ಜಾಥಾ ಪ್ರಚಾರ
ಸೆ.2ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಪುತ್ತೂರು, ಆ.20: ಕಾರ್ಮಿಕ ವರ್ಗದ 17 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಸೆ.2ರಂದು ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರ ನಡೆಯಲಿದ್ದು, ಮುಷ್ಕರದ ಪೂರ್ವಭಾವಿಯಾಗಿ ಸಿಐಟಿಯು ಸಂಘಟನೆಯು ಜಿಲ್ಲೆಯಾದ್ಯಂತ ನಡೆಯುತ್ತಿರುವ ವಾಹನ ಜಾಥಾವು ಗುರುವಾರ ಪುತ್ತೂರು ಕೆಎಸ್ಸಾರ್ಟಿಸಿ ನಿಲ್ದಾಣದ ಗಾಂಧಿ ಕಟ್ಟೆಯ ಬಳಿಯಲ್ಲಿ ಪ್ರಚಾರ ಸಭೆ ನಡೆಸಿತು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಜ್ಯ ಕಾರ್ಯದರ್ಶಿ ವಸಂತ ಆಚಾರ್, ಎಐಟಿಯುಸಿ ದ.ಕ. ಉಪಾಧ್ಯಕ್ಷ ಕರುಣಾಕರ, ತಾಲೂಕು ಸಿಐಟಿಯುವಿನ ಚಂದ್ರಾವತಿ, ದಾಮೋದರ ಗೌಡ, ಎಲ್‌ಐಸಿ ಎಐಟಿಯುವಿನ ಜಿಲ್ಲಾ ಮುಖಂಡ ಜನಾರ್ದನ ಪಾಣಾಜೆ, ಪುತ್ತೂರು ಮುಖಂಡ ದಯಾನಂದ್, ಸಿಐಟಿಯು ಪುತ್ತೂರು ಮುಖಂಡ ನ್ಯಾಯವಾದಿ ಪಿ.ಕೆ.ಸತೀಶನ್ ಮತ್ತಿತರರು ಇದ್ದರು.
Next Story





