ಉರ್ಜಿತ್ ಪಟೇಲ್ ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್

ಹೊಸದಿಲ್ಲಿ, ಆ.20: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗವರ್ನರ್ ಆಗಿ ಖ್ಯಾತ ಅರ್ಥಶಾಸ್ತ್ರಜ್ಞ ಉರ್ಜಿತ್ ಪಟೇಲ್ ನೇಮಕಗೊಂಡಿದ್ದಾರೆ.
ಇದೀಗ ಗವರ್ನರ್ ಆಗಿರುವ ರಘರಾಮ ರಾಜನ್ ಅವರ ಅಧಿಕಾರದ ಅವಧಿ ಸೆಪ್ಟಂಬರ್ 4ರಂದು ಕೊನೆಗೊಳ್ಳುವ ಹಿನ್ನಲೆಯಲ್ಲಿ ಉರ್ಜಿತ್ ಪಟೇಲ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ರಿಸರ್ವ್ ಬ್ಯಾಂಕ್ ನ ನಾಲ್ವರು ಡೆಪ್ಯುಟಿ ಗವರ್ನರ್ ಗಳಲ್ಲಿ ಒಬ್ಬರಾಗಿರುವ 52ರ ಹರೆಯದ ಪಟೇಲ್ ಕಳೆದ ಜನವರಿಯಲ್ಲಿ ಮೂರು ವರ್ಷಗಳ ಅವಧಿಗೆ ಮರು ನೇಮಕಗೊಂಡಿದ್ದರು. 2013ರಿಂದ ಅವರು ಸೆಂಟ್ರಲ್ ಬ್ಯಾಂಕ್ ನ ಹಣಕಾಸಿನ ನೀತಿಯ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು.
Next Story





