Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಿಂಧು ಮೂಲಕ ಸಾಧಿಸಿ ತೋರಿಸಿದ ಗೋಪಿ!

ಸಿಂಧು ಮೂಲಕ ಸಾಧಿಸಿ ತೋರಿಸಿದ ಗೋಪಿ!

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು20 Aug 2016 10:44 PM IST
share
ಸಿಂಧು ಮೂಲಕ ಸಾಧಿಸಿ ತೋರಿಸಿದ ಗೋಪಿ!

ಪುಸರಾಲ ವೆಂಕಟ ಸಿಂಧುವಿನ ಈ ಬೆಳ್ಳಿ ಜಯ ಭಾರತಕ್ಕೆ ಎಷ್ಟು ಅಗತ್ಯ ಇತ್ತೋ ಅದಕ್ಕಿಂತ ಹತ್ತುಪಾಲು ಹೆಚ್ಚು ಅಗತ್ಯ ಆಕೆಯ ಕೋಚ್ ಮತ್ತು ಭಾರತದ ರಾಷ್ಟ್ರೀಯ ಕೋಚ್ ಪುಲ್ಯೆಲ್ಲ ಗೋಪಿಚಂದ್‌ಗೆ ಇತ್ತು. ಈ ಜಯದೊಂದಿಗೆ ಗೋಪಿ ತಾನು ಮಾಡುತ್ತಿದ್ದುದೇನೆಂಬುದನ್ನು ಸಂಬಂಧಪಟ್ಟ ವರಿಗೆಲ್ಲ ಸಾಬೀತುಪಡಿಸಿದಂತಾಗಿದೆ.

ಭಾರತೀಯ ಬ್ಯಾಡ್ಮಿಂಟನ್ ಫೆಡರೇಶನ್ ಒಲಿಂಪಿಕ್ಸ್ ತಯಾರಿ ಆರಂಭಿಸಿದಾಗ ಎಲ್ಲವೂ ನೆಟ್ಟಗಿರಲಿಲ್ಲ. ಅನಾದಿಯಿಂದಲೂ ಗೋಪಿಚಂದ್ ಜೊತೆ ಅಹಂ ಜಗಳ ಇರಿಸಿಕೊಂಡೇ ಬಂದಿರುವ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟ ತನ್ನನ್ನು ಮತ್ತು ತನ್ನ ಡಬಲ್ಸ್ ಜೊತೆಗಾತಿ ಅಶ್ವಿನಿ ಪೊನ್ನಪ್ಪರನ್ನು ಚ್ಟಜಛಿಠಿ ಣ್ಝಞಜ್ಚಿ ಟಜ್ಠಿಞ () ಅಡಿ ಆರ್ಥಿಕ ಬೆಂಬಲಕ್ಕೆ ಆಯ್ಕೆ ಮಾಡದ ಕುರಿತಾಗಿ ಮಾಧ್ಯಮಗಳೆದುರೇ ತಗಾದೆ ತೆಗೆದಿದ್ದರು. ನ್ಯಾಷನಲ್ ಕೋಚ್ ಆಗಿ ಗೋಪಿಯ ಪಾತ್ರ ಈ ಪ್ರಕರಣದಲ್ಲಿ ಬಹಳ ನಾಜೂಕು ಸ್ಥಿತಿಗೆ ತಲುಪಿತ್ತು, ಆತ ಎಲ್ಲರಿಗೂ ಸ್ಪಷ್ಟೀಕರಣ ಗಳನ್ನು ಕೊಟ್ಟು ಸುಸ್ತಾಗಬೇಕಾಯಿತು. ಜ್ವಾಲಾ ತನಗಿರುವ ಅಭಿಮಾನಿಗಳ ಬೆಂಬಲವನ್ನು ಇದಕ್ಕೆ ಚೆನ್ನಾಗಿಯೇ ಬಳಸಿಕೊಂಡರು. ಇದೆಲ್ಲ ನಡೆದದ್ದು 2015ರ ಮಧ್ಯಭಾಗದಲ್ಲಿ. ಮುಂದೆ ಇಂಟರ್‌ನ್ಯಾಷನಲ್ ರ್ಯಾಂಕಿಂಗ್ 13ಕ್ಕೇರಿದಾಗ ಜ್ವಾಲಾ-ಅಶ್ವಿನಿ ಜೋಡಿ ಜೊತೆಗೆ ಪುರುಷರ ಡಬಲ್ಸ್ ಜೋಡಿ ಸುಮಿತ್ ರೆಡ್ಡಿ-ಮನು ಅತ್ರಿ ಕೂಡ ಗೆ ಆಯ್ಕೆ ಆದರು.

ತನ್ನ ಕಾಲದ ಅತ್ಯುತ್ತಮ ಆಟಗಾರ, ಆಲ್ ಇಂಗ್ಲೆಂಡ್ ಚಾಂಪಿಯನ್ ಕೂಡ ಆಗಿದ್ದ ಗೋಪಿ ತನ್ನ ಸ್ವಂತ ಮನೆ ಅಡವಿಟ್ಟು ಮೂರು ಕೋಟಿ ಸಾಲ ಪಡೆದು ಹೈದರಾಬಾದಿನಲ್ಲಿ ನಿರ್ಮಿಸಿದ ಬ್ಯಾಡ್ಮಿಂಟನ್ ಅಕಾಡಮಿ ಕಳೆದ ವರ್ಷ ಒಲಿಂಪಿಕ್ಸ್ ತಯಾರಿಗೆ ನ್ಯಾಷನಲ್ ಕ್ಯಾಂಪ್ ತಾಣ ಕೂಡ ಆದಾಗ ಜ್ವಾಲಾ-ಗೋಪಿ ನಡುವಿನ ಗದ್ದಲ ಇನ್ನಷ್ಟು ಹೆಚ್ಚಾಯಿತು. ಕೋಚಿಂಗ್ ವೇಳೆ ಅಸಹಕಾರ, ಮಾಧ್ಯಮಗಳಲ್ಲಿ ಕೆಸರೆರಚಾಟ ನಡೆದೇ ಇತ್ತು. ಗೋಪಿ ಕೋಚ್ ಆಗಿ ತನ್ನ ಆಟ-ಬೆಳವಣಿಗೆಗಳ ಬಗ್ಗೆ ಬೇಕೆಂದೇ ಆಸಕ್ತಿ ವಹಿಸುತ್ತಿಲ್ಲ ಎಂಬುದು ಜ್ವಾಲಾ ಅಸಮಾಧಾನದ ಮೂಲ.
ನಡುವೆ ಇನ್ನೊಂದು ಹಠಾತ್ ಬೆಳವಣಿಗೆಯಲ್ಲಿ ಭಾರತದ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ತನ್ನನ್ನು ದೀರ್ಘಕಾಲ ಆಡಿಸಿ ಬೆಳೆಸಿದ ಕೋಚ್ ಗೋಪಿಯನ್ನು ತೊರೆದು ಬೆಂಗಳೂರು ಸೇರಿ ಇನ್ನೊಬ್ಬ ಆಟಗಾರ ವಿಮಲ್ ಕುಮಾರ್ ಅವರನ್ನು ತನ್ನ ಕೋಚ್ ಆಗಿ ಮಾಡಿಕೊಂಡಿದ್ದರು. ‘’‘ಗೋಪಿ ಜೊತೆ ತನ್ನ ಆಟ ನಿಂತ ನೀರಾಗತೊಡಗಿತ್ತು; ತನಗೆ ಅಲ್ಲಿ ಬೇಕಿದ್ದಷ್ಟು ಅಟೆನ್ಷನ್ ಸಿಗಲಿಲ್ಲ; ಒಂದು ಹಂತದಲ್ಲಿ ಆಟದಿಂದ ನಿವೃತ್ತಿಯ ಯೋಚನೆ ಮಾಡಿದ್ದ ತಾನು ವಿಮಲ್ ಕುಮಾರ್ ಜೊತೆ ಸೇರಿದ ಮೇಲೆ, ತನಗೆ ಚಾಂಪಿಯನ್ ಆಗಬಹುದೆಂಬ ಕಾನ್ಫಿಡೆನ್ಸ್ ಬಂದಿದೆ’’ ಎಂಬ ಮಾತಾಡಿದ್ದರು.

ಹೀಗೆ, ಒಂದಾದ ಮೇಲೊಂದು ವಿವಾದಗಳು ಎದುರಾದಾಗ ಗೋಪಿ ತಣ್ಣಗೆ, ಎಲ್ಲ ನೋವು ನುಂಗಿಕೊಂಡು ತನ್ನ ಟ್ರಂಪ್ ಕಾರ್ಡ್ ಸಿದ್ಧಪಡಿಸುತ್ತಿದ್ದರು. ಸಿಂಗಲ್ಸ್‌ಗೆ ಸಂಬಂಧಿಸಿದಂತೆ ದೇಶದ ಅತ್ಯಂತ ಯಶಸ್ವಿ ಕೋಚ್ ಗಳಲ್ಲೊಬ್ಬರಾದ ಗೋಪಿಗೆ, ತನ್ನ ತಾಕತ್ತನ್ನು ಪ್ರೂವ್ ಮಾಡಿ ತೋರಿಸಲು ಉಳಿದಿದ್ದ ಏಕೈಕ ಹಾದಿ - ಸಿಂಧು.
ಒಂದು ವೇಳೆ, ಈ ಬಾರಿ ಸಿಂಧು ಮತ್ತು ಕಿಡಾಂಬಿ ಶ್ರೀಕಾಂತ್ ಸಾಧನೆ ಒಲಿಂಪಿಕ್ಸ್‌ನಲ್ಲಿ ಕಳಪೆ ಇರುತ್ತಿದ್ದರೆ, ಗೋಪಿಗೆ ತನ್ನ ಮೇಲೆ ಬಂದಿರುವ ಅಪವಾದಗಳಿಗೆ ಸಮರ್ಥನೆಗಳನ್ನು ಕೊಡುವುದು ಬಹಳ ಕಷ್ಟವಾಗುತ್ತಿತ್ತು. ಆದರೆ ಸಿಂಧು ತನ್ನ ಗುರುವಿಗೆ ಕೂಡ ಕವಿದಿದ್ದ ಕಾರ್ಮೋಡವನ್ನು ಸರಿಸಿ ‘ಬೆಳ್ಳಿ ರೇಖೆ’ಮೂಡಿಸಿದ್ದಾರೆ!

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X