ಸಿಂಧುಗೆ 7 ಕೋ. ರೂ. ಬಹುಮಾನ

ಹೈದರಾಬಾದ್, ಆ.20: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧುಗೆ ತೆಲಂಗಾಣ ಸರಕಾರ ಶನಿವಾರ 5 ಕೋಟಿ ರೂ. ಹಾಗೂ ದಿಲ್ಲಿ ಸರಕಾರ 2 ಕೋಟಿ ರೂ. ಬಹುಮಾನ ಪ್ರಕಟಿಸಿದೆ.
‘‘ ಸಿಂಧುಗೆ 5 ಕೋಟಿ ರೂ. ನಗದು ಬಹುಮಾನದ ಜೊತೆಗೆ ಮನೆ ನಿವೇಶನ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಸಿಂಧು ಬಯಸಿದರೆ ಸರಕಾರಿ ನೌಕರಿ ನೀಡಲಾಗುವುದು’’ಎಂದು ರಾಜ್ಯ ಸಚಿವ ಸಂಪುಟದ ಸಭೆಯ ಬಳಿಕ ಸುದ್ದಿಗಾರರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
Next Story





