ರಿಯೋ ಒಲಿಂಪಿಕ್ಸ್ :ಗಾಲ್ಫ್ ಅದಿತಿ ಅಶೋಕ್ ಪದಕದ ವಿಶ್ವಾಸ ಕ್ಷೀಣ

ರಿಯೋಡಿಜನೈರೊ, ಆ.20: ಮೊದಲ ಎರಡು ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಗಾಲ್ಫರ್ ಅದಿತಿ ಅಶೋಕ್ ಶುಕ್ರವಾರ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಪದಕದ ವಿಶ್ವಾಸ ಕ್ಷೀಣಿಸಿದೆ.
ಬೆಂಗಳೂರಿನ ಗಾಲ್ಫರ್ ಅದಿತಿ ಎರಡನೆ ಸುತ್ತಿನ ಬಳಿಕ 8ನೆ ಸ್ಥಾನ ಪಡೆದು ಪದಕದ ಭರವಸೆ ಮೂಡಿಸಿದ್ದರು. ಆದರೆ, ಮೂರನೆ ಸುತ್ತಿನಲ್ಲಿ 23 ಸ್ಥಾನ ಕೆಳ ಜಾರಿದ ಅದಿತಿ ನಾಲ್ಕನೆ ಹಾಗೂ ಅಂತಿಮ ಸುತ್ತಿನಲ್ಲಿ 41ನೆ ಸ್ಥಾನ ಪಡೆದು ಪದಕದ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.
Next Story





