ನೈನಾಡು: ಖೋ ಖೋ ಪಂದ್ಯಾಟದ ಸಮಾರೋಪ

ಬಂಟ್ವಾಳ, ಆ. 20: ಇಲ್ಲಿನ ನೈನಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಸಂಜೆ ಸಮಾರೋಪಗೊಂಡ ತಾಲೂಕು ಮಟ್ಟದ ಕೊಕ್ಕೊ ಪಂದ್ಯಾಟದಲ್ಲಿ ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆ ಬಾಲಕರ ತಂಡ ಮತ್ತು ಬೋಳಂತಿಮೊಗರು ಸರಕಾರಿ ಪ್ರೌಢ ಶಾಲೆ ಬಾಲಕಿಯರ ತಂಡವು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ.
ಇಲ್ಲಿನ ನೈನಾಡು ಸರಕಾರಿ ಪ್ರೌಢಶಾಲೆ ಬಾಲಕರು ಮತ್ತು ಬಾಲಕಿಯರ ತಂಡವು ಅನುಕ್ರಮವಾಗಿ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. ತಾಲೂಕಿನ ಒಟ್ಟು ಎಂಟು ಬಾಲಕರ ತಂಡ ಮತ್ತು ಆರು ಬಾಲಕಿಯರ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು, ಈ ಪಕಿ ಸುಹಾಸ್ ನೈನಾಡು, ಸುಕೇಶ್ ಕೊಡ್ಮಾಣ್, ಶಿವಪ್ರಸಾದ್ ಕೊಡ್ಮಾಣ್, ಪಾತಿಮಾ ನೌಶಿರ್ ಬೋಳಂತಿಮೊಗರು, ರೆನಿಟಾ ನೈನಾಡು, ಹೇಮಾ ಬೋಳಂತಿಮೊಗರು ಇವರಿಗೆ ವೈಯಕ್ತಿಕ ಸಾಧನೆಗಾಗಿ ಸ್ಥಳೀಯ ಉದ್ಯಮಿ ಹರೀಂದ್ರ ಪೈ ಟ್ರೋಫಿ ಬಹುಮಾನ ವಿತರಿಸಿದರು.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಮಾತನಾಡಿ, ಗ್ರಾಮೀಣ ಕ್ರೀಡಾ ಪ್ರತಿಬೆಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ತರಬೇತಿ ಅಗತ್ಯವಿದೆ ಎಂದರು. ಪಿಲಾತಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಸದಸ್ಯರಾದ ನಾಗೇಶ್, ನೈನಾಡು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ್, ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಇನಾಸ್ ರಾಡ್ರಿಗಸ್, ಸದಸ್ಯರಾದ ಪ್ರಮೀಳ, ಹರೀಶ ಶೆಟ್ಟಿ, ಹರೀಶ ಪೂಜಾರಿ, ಉಪನ್ಯಾಸಕ ಪ್ರದೀಪ್ ಮೂಡುಬಿದ್ರೆ, ರಿಕ್ಷಾ ಚಾಲಕರ ಸಂಘದ ಉಪಾದ್ಯಕ್ಷ ಮಿಥುನ್ ಪ್ರು ಮತ್ತಿತರರು ಬಹುಮಾನ ವಿತರಿಸಿದರು.
ದೈಹಿಕ ಶಿಕ್ಷಕ ವಾಸು, ಶಿಕ್ಷಕಿಯರಾದ ರಮಾ ಮೋಹನ್, ಸೌಮ್ಯಾ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಪ್ರಕಾಶ ನ್‌ಕಾ ವಂದಿಸಿದರು. ಹೇಮಣ್ಣ ನಿಂಬಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.







