ವಿದ್ಯಾರ್ಥಿ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕು: ಝಕರಿಯ ಜೋಕಟ್ಟೆ

ಮಂಜೇಶ್ವರ, ಆ.20: ವಿದ್ಯಾರ್ಥಿ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದು ಝಕರಿಯ ಜೋಕಟ್ಟೆ ಹೇಳಿದ್ದಾರೆ.
ಅವರು ಪೈವಳಿಕೆಯ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯಲ್ಲಿ ನಡೆದ ಸಹದಾ ವಿದ್ಯಾರ್ಥಿ ಸಂಘಟನೆಯ ಸದಸ್ಯತನ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಪಿ.ಬಿ. ಅಬ್ದುರ್ರಝಾಕ್ ಉದ್ಘಾಟಿಸಿದರು.
ಪಯ್ಯಕ್ಕಿ ಅಕಾಡಮಿ ಪ್ರಾಚಾರ್ಯ ಪಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪಯ್ಯಕ್ಕಿ ಅಕಾಡಮಿ ಕಾರ್ಯದರ್ಶಿ ಹನೀಫ್ ಹಾಜಿ ಪೈವಳಿಕೆ ಪ್ರಮಾಣವಚನ ಬೋಧಿಸಿದರು.
ವೇದಿಕೆಯಲ್ಲಿ ಪಯ್ಯಕ್ಕಿ ಅಕಾಡಮಿ ಮ್ಯಾನೇಜರ್ ಅಬ್ದುಲ್ ಮಜೀದ್ ದಾರಿಮಿ, ಪಿ.ಎಚ್. ಅಬ್ದುಲ್ ಖಾದರ್, ಸಿರಾಜುದ್ದೀನ್ ಪೈಝಿ, ಇಬ್ರಾಹೀಂ ಕೊಮ್ಮಂಗುದಿ, ಹಮೀದ್ ಹಾಜಿ, ಅಬೂಬಕರ್ ಹಾಜಿ, ಅಬ್ದುಲ್ಲ ಹಾಜಿ, ಅಝೀಝ್ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು.
Next Story





