Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಎರಡನೆ ಅವಧಿ ವದಂತಿ

ಎರಡನೆ ಅವಧಿ ವದಂತಿ

ವಾರ್ತಾಭಾರತಿವಾರ್ತಾಭಾರತಿ20 Aug 2016 11:40 PM IST
share
ಎರಡನೆ ಅವಧಿ ವದಂತಿ

ಎರಡನೆ ಅವಧಿ ವದಂತಿ

ರಾಜಧಾನಿಯ ಪವರ್ ಕಾರಿಡಾರ್‌ನಲ್ಲಿ ಮತ್ತೊಂದು ವದಂತಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಕನಿಷ್ಠ ಪತ್ರಕರ್ತರ ವಲಯದಲ್ಲಂತೂ ಇದು ವೈರಸ್‌ನಂತೆ ಹರಿದಾಡುತ್ತಲೇ ಇದೆ. ಅದೇನು ಗೊತ್ತೇ? ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಎರಡನೆ ಅವಧಿಗೆ ನೇಮಕಗೊಳ್ಳುತ್ತಾರೆ ಎನ್ನುವುದು. ಯಾವುದೇ ಕ್ಷಣದಲ್ಲಿ ಈ ಆದೇಶ ಹೊರಬೀಳಬಹುದು! ದುರ್ಬಲ ಸುದ್ದಿದಿನದಲ್ಲಂತೂ ಇದು ದೇವಸಂದೇಶದಂತೆ ಮಾಧ್ಯಮ ವಲಯದಲ್ಲಿ ಪಸರಿಸಿತು. ಇದು ಹಣಕಾಸು ಸಚಿವಾಲಯ ಅಧಿಕಾರಿಗಳನ್ನೂ ಬಿಡಲಿಲ್ಲ. ಆರ್‌ಬಿಐ ಗವರ್ನರ್ ನೇಮಕದ ಬಗ್ಗೆ ಅಧಿಕೃತ ಘೋಷಣೆ ಯಾವಾಗ ಹೊರಬೀಳುತ್ತದೆ, ಯಾರಾಗುತ್ತಾರೆ ಎಂದು ಬಹಿರಂಗಪಡಿಸುವಂತೆ ಅವರಿಗೆ ಪತ್ರಕರ್ತರು ದುಂಬಾಲು ಬಿದ್ದಿದ್ದರು. ಪದೇ ಪದೇ ಕಾಟ ತಾಳಲಾರದೇ ಅವರು, ಅದು ಯಾರೂ ಆಗಿರಬಹುದು; ರಾಜನ್ ಮತ್ತೊಂದು ಅವಧಿಗೆ ನೇಮಕಗೊಳ್ಳಲೂಬಹುದು ಎಂದು ಮಾಧ್ಯಮಗಳಿಗೆ ಹೇಳಿದರು ಎನ್ನಲಾಗಿದೆ. ಇದು ವದಂತಿಯ ಮೂಲ. ಆದರೆ ಸಂಪಾದಕ ವರ್ಗ ಈ ವದಂತಿಯ ಆಳವನ್ನು ಅಳೆದಾಗ, ಇದು ಹಾಗೆಯೇ ಹುಟ್ಟಿಕೊಂಡ ಪುಕಾರು ಎನ್ನುವುದು ಖಚಿತವಾಯಿತು. ಈ ವದಂತಿ ಸಹಜ ಸಾವು ಕಂಡಿತು.

ದ್ವಿಪಾತ್ರದಲ್ಲಿ ರವಿಶಂಕರ ಪ್ರಸಾದ್

ರವಿಶಂಕರ್ ಪ್ರಸಾದ್ ಅವರಿಗೆ ಈಗ ಕೈಕಟ್ಟಿದಂಥ ಸಂದಿಗ್ಧ ಸ್ಥಿತಿ. ದೂರಸಂಪರ್ಕ ಖಾತೆ ಸಚಿವರಾಗಿದ್ದ ಅವರಿಗೆ ಇದೀಗ ಕಾನೂನು ಸಚಿವಾಲಯದ ಹೊಣೆಯೂ ಹೆಗಲೇರಿದೆ. ದೂರಸಂಪರ್ಕ ಸಚಿವಾಲಯದ ರಾಶಿ ರಾಶಿ ಕಡತಗಳು ಸಚಿವರ ಮೇಜಿನಲ್ಲಿ ಬಿದ್ದಿವೆ. ಕೆಲವೊಂದು ಕಡತಗಳಲ್ಲಿ ತಾವೇ ದೂರಸಂಪರ್ಕ ಖಾತೆ ಸಚಿವರಾಗಿದ್ದಾಗ ಬರೆದ ಟಿಪ್ಪಣಿಗಳಿವೆ. ಕೇಂದ್ರ ಕಾನೂನು ಸಚಿವರಾಗಿ ಇದೀಗ ರವಿಶಂಕರ್‌ಪ್ರಸಾದ್ ತಮ್ಮ ಕಡತಕ್ಕೆ ತಾವೇ ಕಾನೂನು ಅಭಿಪ್ರಾಯ ನೀಡಬೇಕು. ಕಾನೂನು ಸಚಿವರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾದ ಹಿನ್ನೆಲೆಯಲ್ಲಿ ಈ ಜವಾಬ್ದಾರಿಯನ್ನು ಪ್ರಸಾದ್‌ಗೆ ವಹಿಸಲಾಗಿದೆ. ನ್ಯಾಯಾಂಗ ನೇಮಕಾತಿ ಬಗ್ಗೆ ಬಿರುಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ನಿರ್ವಹಣೆಗೆ ಪ್ರಸಾದ್ ಸೂಕ್ತ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ದೂರಸಂಪರ್ಕ ಸಚಿವಾಲಯದ ಕಾನೂನು ತಡೆಗಳನ್ನು ಹೇಗೆ ಪ್ರಸಾದ್ ನಿಭಾಯಿಸುತ್ತಾರೆ ಎಂಬ ಕುತೂಹಲ ಇದೀಗ ಟೆಲಿಕಾಂ ವಲಯದಲ್ಲಿದೆ. ಕಾನೂನು ಸಚಿವರಾದ ರವಿಶಂಕರ್, ದೂರಸಂಪರ್ಕ ಸಚಿವರಾದ ರವಿಶಂಕರ್‌ಗೆ ಸಲಹೆ ಕೊಡಬೇಕು!

ಯೆಚೂರಿ ಹಾಸ್ಯ

ಎಲ್ಲ ಮಾರ್ಕ್ಸ್‌ವಾದಿಗಳೂ ಹಾಸ್ಯಪ್ರಿಯರಲ್ಲ ಎನ್ನುವಂತಿಲ್ಲ. ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಸ್ಯಪ್ರಜ್ಞೆಗೆ ಹೆಸರಾದವರು. ಸರಕು ಮತ್ತು ಸೇವಾ ಕಾಯ್ದೆ ಕುರಿತ ಮತದಾನದ ಬಳಿಕ ಎಣಿಕೆಕಾರ್ಯ ನಡೆಯುತ್ತಿದ್ದರೆ, ಯೆಚೂರಿ ಜಿಎಸ್‌ಟಿಗೆ ಚಾಲನೆ ದೊರಕುವ ಮುನ್ನವೇ ಸಂಖ್ಯೆ (ತೆರಿಗೆ ಪ್ರಮಾಣ) ಏರುತ್ತಿರುವಂತಿದೆ ಎಂದು ಹೇಳಿದರು. ಈ ಕಲಾಪದ ವೇಳೆ ಸಂಸತ್ತು ಕೂಡಾ ತುಂಬು ಲವಲವಿಕೆಯಿಂದಿತ್ತು. ಎಷ್ಟೆಂದರೆ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಅವರ ಕಾಂಗ್ರೆಸ್ ಪ್ರತಿಸ್ಪರ್ಧಿ ಪಿ.ಚಿದಂಬರಂ ಕೂಡಾ ನಗೆ ವಿನಿಮಯ ಮಾಡಿಕೊಂಡರು. ಪ್ರತಿಹಂತದಲ್ಲೂ ತೆರಿಗೆ ಹೆಚ್ಚುತ್ತದೆ ಎಂದು ಬಹುಶಃ ಯೆಚೂರಿ ಸರಿಯಾಗಿಯೇ ಅಂದಾಜಿಸಿದ್ದಾರೆ.

ಚಿದಂಬರಂಗೆ ‘ಆಂತರಿಕ’ ಸಮಸ್ಯೆ!

ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ತಮ್ಮ ಪಕ್ಷದ ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ರಾಜ್ಯಸಭೆಯಲ್ಲಿ ಪಿ.ಚಿದಂಬರಂ ಬಗ್ಗೆ. ಅದಕ್ಕೆ ಮುಖ್ಯ ಕಾರಣ ಜಿಎಸ್‌ಟಿ ಮಸೂದೆ ಅನುಮೋದನೆ ವೇಳೆ ಚಿದಂಬರಂ ಆ್ಯಂಡ್ ಕಂಪೆನಿ ಹೆಚ್ಚಿನ ಮೈಲೇಜ್ ಪಡೆಯಿತು ಎನ್ನುವುದು. ಜಿಎಸ್‌ಟಿ ವೇಳೆ ಲೋಕಸಭೆಯ ಕಾಂಗ್ರೆಸ್ ಮುಖಂಡರ ಅಭಿಪ್ರಾಯಗಳನ್ನು ಪಕ್ಷ ಪರಿಗಣಿಸಲೇ ಇಲ್ಲ ಎನ್ನುವುದು ವಾಸ್ತವ. ಮೊಯ್ಲಿಯವರಂತೂ, ಇಂಥ ನಿರ್ಲಕ್ಷ್ಯದ ಧೋರಣೆ, ರಾಜ್ಯಸಭೆ ಹೆಚ್ಚು ಬುದ್ಧಿವಂತರ ಸದನ ಎಂಬ ಭಾವನೆ ಮೂಡಿಸುತ್ತದೆ ಎಂದು ದೂರು ನೀಡಿದ್ದಾರೆ. ಆದರೆ ಕೆಲ ಸಿನಿಕರ ಹೇಳಿಕೆಯಂತೆ ವಾಸ್ತವವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬಗ್ಗೆ ಮೊಯ್ಲಿಯವರ ಆಕ್ರೋಶ ಹಾಗೂ ಅಸಮಾಧಾನ ಇರುವುದು ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಸಿಎಂ ಆಗಿ ಮುಂದುವರಿಸಿರುವ ಬಗ್ಗೆ. ಆದರೆ ಇವೆರಡರ ನಡುವಿನ ಕೊಂಡಿಯನ್ನು ವಿವರಿಸುವುದು ಯಾರಿಗೂ ಸಾಧ್ಯವಿಲ್ಲ!

ಇದು ಪಪ್ಪುರಾಜಕೀಯ

ಪಪ್ಪುಯಾದವ್ ಹಾಗೂ ಅವರ ಪತ್ನಿ ರಂಜಿತಾ ಇಬ್ಬರೂ ಲೋಕಸಭಾ ಸದಸ್ಯರು. ಪತ್ನಿ ಕಾಂಗ್ರೆಸ್ ಪಕ್ಷದ ಸದಸ್ಯೆ. ಪರಸ್ಪರ ವೈರುಧ್ಯದ ರಾಜಕೀಯ ಅಭಿಪ್ರಾಯಗಳ ವಿನಿಮಯಕ್ಕೆ ಈ ದಂಪತಿ ಹೆಸರುವಾಸಿ. ಪತಿ-ಪತ್ನಿ ಪ್ರತ್ಯೇಕ ಸಾಲಿನಲ್ಲೇ ಆಸೀನರಾಗುತ್ತಾರೆ. ಆದರೆ ಇದೀಗ ಇಂಥ ಸಂಘರ್ಷವನ್ನು ತಪ್ಪಿಸಲು ವಿನೂತನ, ಅನೌಪಚಾರಿಕ ಮಾರ್ಗವನ್ನು ಕಂಡುಕೊಂಡಿದ್ದಾರೆ ಎನ್ನಲಾಗುತ್ತದೆ. ಮೊನ್ನೆ ಪಪ್ಪುಯಾದವ್ ಬಿಹಾರದ ಸಿಎಂ ನಿತೀಶ್ ಕುಮಾರ್ ಆಡಳಿತವನ್ನು ಟೀಕಿಸುತ್ತಿದ್ದರೆ, ರಂಜಿತಾ ಅಲ್ಲಿಂದ ಮಾಯವಾಗಿದ್ದರು. ಯಾರ ಗಮನಕ್ಕೂ ಬಾರದಂತೆ ಸದನದಿಂದ ಹೊರ ನಡೆದಿದ್ದರು. ಬಹುಶಃ ಕಾಂಗ್ರೆಸ್ ಪಾಲುದಾರ ಪಕ್ಷವಾಗಿರುವ ಮೈತ್ರಿ ಸರಕಾರದ ಮೇಲೆ ಪತಿ ವಾಗ್ದಾಳಿ ನಡೆಸುವುದನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ. ಈ ‘ಗುಪ್ತ ಪ್ರೀತಿ’ ದಂಪತಿಯ ಸಾರ್ವಜನಿಕ ಹಾಗೂ ಖಾಸಗಿ ಜೀವನಕ್ಕೂ ಒಳ್ಳೆಯದು ಎಂಬ ಅಭಿಪ್ರಾಯವನ್ನು ಬಿಹಾರಿ ರಾಜಕಾರಣಿಗಳು ವ್ಯಕ್ತಪಡಿಸುತ್ತಿದ್ದಾರೆ. ಸ್ಪಷ್ಟವಾಗಿ ಇಬ್ಬರ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ದಂಪತಿಯ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X