ಬಾಲಕನಿಂದ ವಾಹನ ಚಾಲನೆ: ಕುಟುಂಬಕ್ಕೆ 50,000 ರೂ. ದಂಡ
ಮುಂಬೈ,ಆ.20: ಕಳೆದ ವರ್ಷ ನಗರದಲ್ಲಿ ವಾಹನ ಚಾಲನೆ ಪರವಾನಿಗೆಯಿಲ್ಲದೆ ತನ್ನ ಕುಟುಂಬದ ಕಾರನ್ನು ಚಲಾಯಿಸಿ ಅಪಘಾತವೆಸಗಿದ್ದ ಅಪ್ರಾಪ್ತ ವಯಸ್ಕ ಬಾಲಕನೋರ್ವನ ತಂದೆಗೆ ಬಾಂಬೆ ಉಚ್ಚ ನ್ಯಾಯಾಲಯವು 50,000 ರೂ.ದಂಡವನ್ನು ವಿಧಿಸಿದೆ. ಈ ಅಪಘಾತದಲ್ಲಿ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತಿದ್ದ ಇನ್ನೋರ್ವ ಬಾಲಕ ಗಾಯಗೊಂಡಿದ್ದ.
2015, ನ.14ರಂದು ಬಾಲಕ ಚಲಾಯಿಸುತ್ತಿದ್ದ ಕಾರು ಅಂಧೇರಿ ವರ್ಸೋವಾದ ಲೋಖಂಡವಾಲಾ ಪ್ರದೇಶದಲ್ಲಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಆತನ ಸ್ನೇಹಿತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆದರೆ ಬಳಿಕ ಪರಸ್ಪರ ರಾಜಿ ಮಾಡಿಕೊಂಡಿದ್ದ ಇಬ್ಬರೂ ಬಾಲಕರ ಹೆತ್ತವರು ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
Next Story





