ದಸರಾ ಲೋಗೋ, ವೆಬ್‌ಸೈಟ್ ಅನಾವರಣ

ಮೈಸೂರು, ಆ.20: ವಿಶ್ವವಿಖ್ಯಾತ ದಸರಾ ಉತ್ಸವದ ಲೋಗೋ ಮತ್ತು ವೆಬ್‌ಸೈಟ್‌ನ್ನು ಸಚಿವ ಮಹದೇವಪ್ಪ ಇಂದು ಅನಾವರಣಗೊಳಿಸಿದರು.
ನಾಡಹಬ್ಬ ಮೈಸೂರು ದಸರಾ-2016 ಉದ್ಘಾಟನೆಗೆ ಖ್ಯಾತ ಸಾಹಿತಿಗಳಾದ ಶ್ರೀಚನ್ನವೀರ ಕಣವಿಯವರನ್ನು ಆಹ್ವಾನಿಸಲಾಗಿದ್ದು ದಸರಾ ಚಟುವಟಿಕೆಗಳಿಗೆ ವಿದ್ಯುಕ್ತ ಚಾಲನೆ ನೀಡುವ ಗಜಪಯಣ ಆ. 21ರಂದು ಹುಣಸೂರು ತಾಲೂಕಿನ ನಾಗಪುರ ಗಿರಿಜನ ಆಶ್ರಯಶಾಲೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಲಿದ್ದಾರೆ.
ದಸರಾ ಆಚರಣೆಯ ಸಲುವಾಗಿ 17 ಉಪಸಮಿತಿಗಳನ್ನು 10 ಉಪ ವಿಶೇಷಾಧಿಕಾರಿ ಗಳ ನೇತೃತ್ವದಲ್ಲಿ ರಚಿಸಲಾಗಿದೆ. ಸದರಿ ಸಮಿತಿಗಳು ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಿ ಆಯಾ ಉಪಸಮಿತಿಗಳ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮಗಳ ರೂಪುರೇಷೆ ಗಳಿಗೆ ಒಂದು ರೂಪ ಕೊಡುತ್ತಿದ್ದಾರೆ. ಈ ಬಗ್ಗೆ ಅಂತಿಮವಾಗಿ ಕಾರ್ಯಕಾರಿ ಸಮಿತಿಯ ಸಭೆೆಯಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುವುದು.
ದಸರಾ ಆಚರಣೆಯ ಅಂಗವಾಗಿ ಅತಿ ಮುಖ್ಯವಾದ ಅಂಶವಾದ ಪ್ರಚಾರ ಕಾರ್ಯವನ್ನು ಇತ್ತೀಚಿನ ನವೀನ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅರ್ಥಪೂರ್ವ ವಾಗಿ ಮಾಡಲು ಕ್ರಮಕೈಗೊಂಡಿದೆ.





