ಪಂಪ್‌ವೆಲ್: ತಿರಂಗಾ ರ್ಯಾಲಿಗೆ ಅಮಿತ್ ಶಾರಿಂದ ಚಾಲನೆ

ಮಂಗಳೂರು, ಆ.21:70ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಮತ್ತು ಬಲಿದಾನಗೈದ ಹುತಾತ್ಮರನ್ನು ಸ್ಮರಿಸುವುದಕ್ಕಾಗಿ ನಗರದ ಪಂಪ್‌ವೆಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಚಾಲನೆ ಇಂದು ನೀಡಿದರು.
ಪಂಪ್‌ವೆಲ್ ವೃತ್ತದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ವೇಷಧಾರಿನ್ನೊಳಗೊಂಡ ಟ್ಯಾಬ್ಲೊಗೆ ತ್ರಿವರ್ಣ ಧ್ವಜವನ್ನು ಜೋಡಿಸಿ ರ್ಯಾಲಿಗೆ ಹಸಿರು ನಿಶಾನೆ ತೋರಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಚಲಾಯಿಸುತ್ತಿದ್ದ ಬುಲೆಟ್ ಬೈಕ್‌ನಲ್ಲಿ ಹಿಂಬದಿ ಸವಾರರಾಗಿ ತ್ರಿವರ್ಣ ಧ್ವಜದೊಂದಿಗೆ 100 ಮೀಟರ್ ಚಲಿಸಿದರು. ಇದೇ ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಸಿ.ಟಿ.ರವಿ ಮೊದಲಾದವರು ಪಾಲ್ಗೊಂಡರು.
ಪಂಪ್‌ವೆಲ್‌ನಿಂದ ಸುಮಾರು 150ಕ್ಕೂ ಅಧಿಕ ಬೈಕ್ ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
Next Story





