"ವಿದೇಶಿ ಹಸುಗಳ ಹಾಲು ಕುಡಿದರೆ ಮಕ್ಕಳು ಅಪರಾಧಿಗಳಾಗುತ್ತಾರೆ "!
ಆರೆಸ್ಸೆಸ್ ನಾಯಕ ಶಂಕರ್ ಲಾಲ್

ಹೊಸದಿಲ್ಲಿ, ಆ.21: ಜೆರ್ಸಿ ಹಸುಗಳು ಬ್ರಿಟಿಷ್ ಗ್ರಾಮಗಳ ಅಕರ್ಷಕ ಸಂಕೇತವಾಗಿರಬಹುದು. ಆದರೆ ಹಿಂದೂ ರಾಷ್ಟ್ರೀಯವಾದಿಗಳ ಪ್ರಕಾರ ಇದು ಬಾಲಕರಲ್ಲಿ ಅಪರಾಧ ಮನೋಭಾವವನ್ನು ಸೃಷ್ಟಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರೂ ಸದಸ್ಯರಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೊಸ ಸಂಶೋಧನೆ ಇದು. ಮೋದಿ ಕೂಡಾ ಇದೇ ಸಂಘಟನೆಯಲ್ಲಿ ತರಬೇತಿ ಪಡೆದು ರಾಜಕೀಯ ಪ್ರವೇಶ ಪಡೆದವರು. ಆರೆಸ್ಸೆಸ್ ದೇಶದಲ್ಲಿ ಗೋಹತ್ಯೆ ನಿಷೇಧದ ಬಗ್ಗೆಯೂ ಲಾಬಿ ಮಾಡುತ್ತಲೇ ಬಂದಿದೆ. ಸೆಗಣಿಯನ್ನು ಕೀಟನಾಶಕವಾಗಿ ಬಳಸುವುದನ್ನು, ಇಂಧನವಾಗಿ ಹಾಗೂ ಗೋಮೂತ್ರವನ್ನು ಆರೋಗ್ಯಕರ ಪೇಯವಾಗಿ ಬಿಂಬಿಸುತ್ತಾ ಬಂದಿದೆ.
ಇದೀಗ ದೇಶಿ ತಳಿಗಳನ್ನು ಸಂರಕ್ಷಿಸಿಕೊಳ್ಳುವ ಬಗ್ಗೆ ಭಾರತೀಯ ಮಧ್ಯಮವರ್ಗದವರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಭಾರತೀಯ ತಳಿಗಳನ್ನು ಉಳಿಸುವ ಮಹತ್ವದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಧ್ಯಮವರ್ಗದ ಮಕ್ಕಳು ಅಪರಾಧಗಳತ್ತ ಆಕರ್ಷಿತರಾಗಬಾರದು ಎಂದಾದರೆ ಭಾರತೀಯ ತಳಿ ಗೋವುಗಳ ಉತ್ಪನ್ನಗಳನ್ನೇ ಬಳಸಬೇಕು. ಜೆರ್ಸಿ ತಳಿಯ ಉತ್ಪನ್ನಗಳನ್ನಲ್ಲ ಎಂದು ಗೋಸಂರಕ್ಷಣಾ ವಿಭಾಗದ ಮುಖಂಡ ಶಂಕರರಾಲ್ ಹೇಳುತ್ತಾರೆ.
ಭಾರತೀಯ ತಳಿಯ ಹಾಲು ಕುಡಿದರೆ ಅದು ಜನರ ಉತ್ಪಾದಕತೆ ಹೆಚ್ಚಿಸುವುದು ಮಾತ್ರವಲ್ಲದೇ, ಕೆಟ್ಟ ಯೋಚನೆಗಳನ್ನೂ ನಡೆಯುತ್ತದೆ ಎನ್ನುವುದು ಅವರ ವಾದ. ಜೆರ್ಸಿ ಹಾಲಿನಲ್ಲಿ ವಿಷಕಾರಿ ಕಣಗಳು ಇವೆ ಎಂದು ಪ್ರತಿಪಾದಿಸುತ್ತಾರೆ. ಭಾರತದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಭಾರತಕ್ಕೆ ಜೆರ್ಸಿ ತಳಿಯನ್ನು ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾಗಿತ್ತು.







