ಕರ್ನಾಟಕದ ಅತ್ಯಂತ ಹಿರಿಯ ಹುಲಿ ಸಾವು
ಶಿವಮೊಗ್ಗ, ಆ. 21: ಇಲ್ಲಿನ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹುಲಿ ’ಕೃತಿಕಾ’ ರವಿವಾರ ಬೆಳಗ್ಗೆ ಮೃತಪಟ್ಟಿದೆ.
19 ವರ್ಷದ ಕೃತಿಕಾ ಕರ್ನಾಟಕದ ಅತ್ಯಂತ ಹಿರಿಯ ಹುಲಿಯಾಗಿತ್ತು.
ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲೇ ಜನಿಸಿದ್ದ ಕೃತಿಕಾ ಹುಲಿ ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೃತಿಕಾ ಬೆಳಗ್ಗೆ ಕೊನೆಯುಸಿರೆಳೆಯಿತು.
Next Story







