ವೀರಕಂಭ ಗ್ರಾ.ಪಂ. ಸದಸ್ಯರಾಗಿ ಉಬೈದ್ ಕೆ. ಅವಿರೋಧ ಆಯ್ಕೆ

ವಿಟ್ಲ, ಆ.21: ವೀರಕಂಭ ಗ್ರಾಮ ಪಂಚಾಯತ್‌ನ 3ನೆ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅ್ಯರ್ಥಿ ಉಬೈದ್ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೀರಕಂಭ ಗ್ರಾ.ಪಂ.ನ 3ನೆ ವಾರ್ಡ್‌ನಿಂದ ಆಯ್ಕೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ಅಬ್ದುಲ್ ಸತ್ತಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಆ.28 ರಂದು ಮರು ಚುನಾವಣೆ ಘೋಷಿಸಲಾಗಿತ್ತು. ಆ.19 ರಂದು ನಾಮಪತ್ರ ಸಲ್ಲಿಕೆಗೆ ದಿನ ನಿಗದಿಯಾಗಿದ್ದು, ಉಬೈದ್ ಅವರು ನಾಮಪತ್ರ ಸಲ್ಲಿಸಿದ್ದರು. 20 ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಉಬೈದ್ ಕೆ. ಅವರು ಏಕಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರ ಸಿಂಧುವಾಗಿರುವುದಾಗಿ ಚುಣಾವಣಾಧಿಕಾರಿ ಘೋಷಿಸಿರುತ್ತಾರೆ. ಈ ಹಿನ್ನಲೆಯಲ್ಲಿ ವೀರಕಂಭ ಗ್ರಾ.ಪಂ.ನ 3ನೆ ವಾರ್ಡಿನ ಸದಸ್ಯರಾಗಿ ಉಬೈದ್ ಅವಿರೋಧ ಆಯ್ಕೆಗೊಂಡಿದ್ದಾರೆ.
ಇಲ್ಲಿನ ಪಂಚಾಯತ್ ಒಟ್ಟು 14 ಸ್ಥಾನಗಳನ್ನು ಹೊಂದಿದ್ದು, ಈ ಹಿಂದೆ ಕಾಂಗ್ರೆಸ್ ಬೆಂಬಲಿತ 10, ಬಿಜೆಪಿ ಬೆಂಬಲಿತ 4 ಸ್ಥಾನಗಳಿತ್ತು. ಇದೀಗ ಉಬೈದ್ ಆಯ್ಕೆಯೊಂದಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ 11ಕ್ಕೇರಿದಂತಾಗಿದೆ. ಬಿಜೆಪಿ ಸಂಖ್ಯೆ 3ಕ್ಕಿಳಿದಿದೆ.





