ರೋಟರಿ ಸಂಸ್ಥೆಯಿಂದ ವಾಣಿಜ್ಯ ಕೊಡೆಗಳ ವಿತರಣೆ

ಮಂಗಳೂರು, ಆ. 21: ಸ್ವಾತಂತ್ರ ದಿನಾಚರಣೆಯ ಸಲುವಾಗಿ ಹಾಗೂ ರೋಟರಿ ಮಂಗಳೂರು ಮೆಟ್ರೋ ಸಂಸ್ಥೆಯ ಸಮುದಾಯ ಕಲ್ಯಾಣ ಯೋಜನೆಯ ಅಂಗವಾಗಿ ನಗರದ ಕದ್ರಿ ಉದ್ಯಾನವನದ ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ವಾಣಿಜ್ಯ ಕೊಡೆಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಯೋಜನೆಯ ಪ್ರಾಯೋಜಕ ಅಬ್ದುಲ್ ಸಲೀಂ, ರೋಟರಿ ಸಂಸ್ಥೆಯ ಮೂಲಕ 100 ವಾಣಿಜ್ಯ ಕೊಡೆಗಳನ್ನು ನಗರದ ವಿವಿಧ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವುದಾಗಿ ಘೋಷಿಸಿದರು.
ಸಮುದಾಯ ಸೇವಾ ವಿಭಾಗದ ನಿರ್ದೇಶಕ ಡಾ.ರಂಜನ್ ಮಾರ್ಗದರ್ಶನ ನೀಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಶೈಲೇಂದ್ರ ಪೈ, ಸಂಸ್ಥೆಯ ಕಾರ್ಯದರ್ಶಿ ನಿತಿನ್ ಕಾಮತ್ ಉಪಸ್ಥಿತರಿದ್ದರು. ವಸಂತ ಮಲ್ಯ ಕಾರ್ಯಕ್ರಮ ಸಂಘಟಿಸಿದರು.
Next Story





