Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹುಸಿ ದೇಶಪ್ರೇಮದ ಕರಾಳ ಮುಖ

ಹುಸಿ ದೇಶಪ್ರೇಮದ ಕರಾಳ ಮುಖ

ವಾರ್ತಾಭಾರತಿವಾರ್ತಾಭಾರತಿ21 Aug 2016 11:55 PM IST
share
ಹುಸಿ ದೇಶಪ್ರೇಮದ ಕರಾಳ ಮುಖ

ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗಲೆಲ್ಲ, ಸಂಘ ಪರಿವಾರ ಎಂಬ ಪುರೋಹಿತಶಾಹಿ ಬನಿಯಾ ಪರಿವಾರಕ್ಕೆ ದೇಶಪ್ರೇಮ ನೆನಪಾಗುತ್ತದೆ. ಜುಟ್ಟು, ಜನಿವಾರಕ್ಕೆ ಬೆಂಕಿ ಹತ್ತಿದಾಗಲೆಲ್ಲ ಇವರ ಬಾಯಿಯಿಂದ ರಾಷ್ಟ್ರಪ್ರೇಮದ ಮಾತುಗಳು ಉದುರತೊಡಗುತ್ತವೆ. ಈಗ ನಡೆಯುತ್ತಿರುವುದು ಇಂತಹದ್ದೇ ಕಿತಾಪತಿ. ನರೇಂದ್ರ ಮೋದಿ ಆಡಳಿತದ ವೈಲ್ಯ, ಮಹಾದಾಯಿ ಯೋಜನೆಯಲ್ಲಿ ಕರ್ನಾಟಕಕ್ಕೆ ಬಗೆದ ದ್ರೋಹ, ಬ್ರಾಹ್ಮಣವಾದವನ್ನು ದೇಶದ ಮೇಲೆ ಹೇರಲು ಹೊರಟಾಗ ಎದುರಾದ ಪ್ರತಿರೋಧ ಮತ್ತು ಕರಾವಳಿಯಲ್ಲ್ಲಿ ಗೋರಕ್ಷಣೆ ಹೆಸರಿನಲ್ಲಿ ಅಮಾಯಕ ಬಿಲ್ಲವ ಯುವಕ ಪ್ರವೀಣ್ ಪೂಜಾರಿಯನ್ನು ಕೊಂದು ಮುಚ್ಚಿ ಹಾಕಲಾಗದೇ ಇಕ್ಕಟ್ಟಿನಲ್ಲಿ ಸಿಲುಕಿರುವುದು ಇವುಗಳನ್ನೆಲ್ಲ ಮುಚ್ಚಿಕೊಳ್ಳಲು ಎಬಿವಿಪಿಯನ್ನು ಮುಂದೆ ಮಾಡಿ, ಹುಸಿ ದೇಶಪ್ರೇಮದ ಉನ್ಮಾದವನ್ನು ಈ ಪರಿವಾರ ಕೆರಳಿಸುತ್ತಿದೆ. ಈ ಸಂಘಟನೆಯ ಹುನ್ನಾರಕ್ಕೆ ಉತ್ತರ ಭಾರತದ ಕಾಲೇಜು ಪ್ರಾಂಶುಪಾಲರೊಬ್ಬರು ಬಲಿಯಾಗಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಎಂದೂ ವಿರೋಸದ ಈ ಸಂಘಟನೆ ಈಗ ದೇಶಪ್ರೇಮದ ಹೆಸರಿನಲ್ಲಿ ಬಯಲಾಟ ನಡೆಸಿದೆ. ಯಡಿಯೂರಪ್ಪ-ಈಶ್ವರಪ್ಪ ಜಗಳದಲ್ಲಿ ಕಳಚಿ ಬೀಳುತ್ತಿರುವ ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳಲು ಕಾಶ್ಮೀರ ಪ್ರಶ್ನೆ ನೆಪದಲ್ಲಿ ಹುಸಿ ದೇಶಪ್ರೇಮ ಸೃಷ್ಟಿಸಲಾಗುತ್ತಿದೆ.

ಈ ್ಯಾಶಿಸ್ಟ್ ಪರಿವಾರದ ಪ್ರಭಾವಕ್ಕೆ ಒಳಗಾದ ಯುವಕರೊಂದಿಗೆ ಹೇಗೆ ವಾದಿಸಬೇಕೋ ಗೊತ್ತಾಗುತ್ತಿಲ್ಲ. ಇವರಿಗೆ ದೇಶವೆಂದರೆ ಗೊತ್ತಿಲ್ಲ. ದೇಶದ ಚರಿತ್ರೆ ಬಗ್ಗೆ ತಿಳಿದಿಲ್ಲ. ಬುದ್ಧ, ಬಸವಣ್ಣ, ವಿವೇಕಾನಂದರನ್ನು ಓದಿಕೊಂಡಿಲ್ಲ. ಅಂಬೇಡ್ಕರ್, ಭಗತ್‌ಸಿಂಗ್ ಏನು ಹೇಳಿದರು ಎಂಬುದು ಇವರಿಗೆ ಗೊತ್ತಿಲ್ಲ. ಆದರೆ ಬಾಯಿಬಿಟ್ಟರೆ ದೇಶಭಕ್ತಿ ಎನ್ನುತ್ತಾರೆ. ಚರ್ಚೆಗೆ ಇಳಿದರೆ, ಅವಾಚ್ಯ ಪದಗಳನ್ನು ಬಳಸುತ್ತಾರೆ. ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಸಜ್ಜನಿಕೆಯೂ ಅವರಿಗೆ ಗೊತ್ತಿಲ್ಲ. ಯಾವುದೇ ಪ್ರಶ್ನೆ ಕೇಳಿದರೂ ಹುಚ್ಚಾಸ್ಪತ್ರೆ ರೋಗಿಗಳಂತೆ ಎಗರಾಡುತ್ತಾರೆ. ಇಂತಹ ಮಾನಸಿಕ ರೋಗದ ಪ್ರಕರಣಗಳು ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿವೆ. ಅಲ್ಲಿ ತುರ್ತಾಗಿ ಸರಕಾರ ಹುಚ್ಚಾಸ್ಪತ್ರೆ ನಿರ್ಮಿಸಬೇಕಿದೆ.

ಈ ಮನೋರೋಗಿಗಳನ್ನು ಸೃಷ್ಟಿಸಿದ ಎರಡು ಕಾರ್ಯಸೂಚಿಗಳನ್ನು ಹೊಂದಿದೆ. ಒಂದನೆಯದು ತತ್ಕಾಲೀನ ಕಾರ್ಯಸೂಚಿ. ಎರಡನೆಯದ್ದು ದೀರ್ಘಕಾಲೀನ ಕಾರ್ಯಸೂಚಿ. ತತ್ಕಾಲೀನ ಕಾರ್ಯಸೂಚಿಯಲ್ಲಿ ಗೋಹತ್ಯೆ ನಿಷೇಧ, ಮತಾಂತರ ಮುಂತಾದ ವಿಷಯಗಳಿದ್ದರೆ, ದೀರ್ಘಕಾಲೀನ ಕಾರ್ಯಸೂಚಿಯಲ್ಲಿ ಮನುವಾದಿ ಹಿಂದೂರಾಷ್ಟ್ರ ನಿರ್ಮಿಸುವುದು ಪ್ರಮುಖ ಅಂಶವಾಗಿದೆ. ಇತಿಹಾಸದ ಗರ್ಭ ಸೇರಿದ ಶ್ರೇಣೀಕೃತ ಜಾತಿ ವ್ಯವಸ್ಥೆ ಮರುಸ್ಥಾಪಿಸುವುದು ಇದರ ಇನ್ನೊಂದು ಅಂಶ. ಇದಕ್ಕೆ ಪೂರ್ವಭಾವಿಯಾಗಿ ಅಂಬೇಡ್ಕರ್ ರಚಿಸಿದ ದೇಶದ ಸಂವಿಧಾನವನ್ನು ನಾಶಪಡಿಸುವುದು ಇದರ ಮುಖ್ಯಾಂಶವಾಗಿದೆ.

ತತ್ಕಾಲೀನ ಕಾರ್ಯಸೂಚಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದನಸಾಗಾಟದ ನೆಪದಲ್ಲಿ ಮುಸ್ಲಿಮ್ ಯುವಕರನ್ನು ಹಿಡಿದು ಥಳಿಸುತ್ತಿದ್ದರು. ಅದೇ ಈಗ ಬಿಲ್ಲವರ ಮನೆಬಾಗಿಲಿಗೂ ಬಂದಿದೆ. ಉಡುಪಿಯಲ್ಲಿ ಪ್ರವೀಣ್ ಪೂಜಾರಿಯನ್ನು ಜಾತಿ ಹೆಸರಿನಲ್ಲಿ ನಿಂದಿಸಿ, ಅಮಾನುಷವಾಗಿ ಕೊಂದು ಹಾಕಿದ್ದಾರೆ. ಇದೇ ರೀತಿ ಹಿಂದೆ ಪಾಟಾಳಿ ಕೃಷ್ಣಯ್ಯ ಎಂಬ ಶೂದ್ರ ಸಮುದಾಯದ ವ್ಯಕ್ತಿಯನ್ನು ಕೊಂದು ಹಾಕಿದ್ದರು. ಇದಕ್ಕೂ ಮುಂಚೆ ಉಡುಪಿಯಲ್ಲಿ ಹಾಜಬ್ಬ ಮತ್ತು ಹಸನಬ್ಬ ಎಂಬಿಬ್ಬರ ಮೇಲೆ ದಾಳಿ ನಡೆಸಿ, ಬೆತ್ತಲು ಮಾಡಿ ಥಳಿಸಿದ್ದರು. 12 ವರ್ಷಗಳ ಹಿಂದೆ ಈ ಘಟನೆ ನಡೆದಾಗ, ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆದಿತ್ತು. ನಾನು ಮತ್ತು ಸಂಗಾತಿ ಕೆ.ಎಲ್.ಅಶೋಕ್ ಭಾಗವಹಿಸಿದ್ದೆವು. ಆಗ ನಡೆದ ಮೊವಣಿಗೆಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಲಾಗಿದೆಯೆಂದು ಮಣಿಪಾಲ್ ಪತ್ರಿಕೆಯೊಂದು ಸುಳ್ಳು ವರದಿ ಮಾಡಿ, ಅಪಹಾಸ್ಯಕ್ಕೀಡಾಗಿತ್ತು.
     
ಪಾಟಾಳಿ ಕೃಷ್ಣಯ್ಯ, ಪ್ರವೀಣ್ ಪೂಜಾರಿ ಇವರೆಲ್ಲ ಕ್ರಿಮಿನಲ್ ಗೋರಕ್ಷಕ ಕೊಲ್ಲಲ್ಪಟ್ಟ ನಂತರವೂ ಕೂಡ ವಿಶ್ವ ಹಿಂದೂ ಪರಿಷತ್ತಿನ ನಾಯಕ ಜಗದೀಶ ಶ್ರೇಣವ ಈ ಹತ್ಯೆ ಸಮರ್ಥಿಸಿ ಹೇಳಿಕೆ ನೀಡುತ್ತಿದ್ದಾರೆ. ಹತ್ಯೆಗೆ ಮುನ್ನ ಅಲ್ಲಿ ಹೋಗಿ ಪ್ರಚೋದನಾಕಾರಿ ಭಾಷಣ ಮಾಡಿ ಬಂದ ಆರೆಸ್ಸೆಸ್ ಕಲ್ಲಡ್ಕ ಪ್ರಭಾಕರ ಭಟ್ಟ ಒಳಗೊಳಗೆ ಖುಷಿ ಪಡುತ್ತ ತೆಪ್ಪಗೆ ಕೂತಿದ್ದಾರೆ. ಯಾಕೆಂದರೆ, ಸಂಘ ಪರಿವಾರದ ಪುರೋಹಿತಶಾಹಿ ಮಕ್ಕಳ್ಯಾರೂ ಇಂತಹ ಪ್ರಕರಣದಲ್ಲಿ ಸಿಲುಕುವುದಿಲ್ಲ. ಅವರೆಲ್ಲ ವಿದೇಶದಲ್ಲಿ ವ್ಯಾಸಂಗ ಮಾಡುತ್ತ, ಸ್ವದೇಶದಲ್ಲಿ ವ್ಯಾಪಾರ ಮಾಡುತ್ತ ಸುಖವಾಗಿ ಇರುತ್ತಾರೆ. ಆದರೆ ಬಡ ಬಿಲ್ಲವ, ಮೊಗವೀರರ ಮಕ್ಕಳು ಗೋರಕ್ಷಣೆ ಹೆಸರಿನಲ್ಲಿ ಪರಸ್ಪರ ಹೊಡೆದಾಡಿ ಸಾಯುತ್ತಿದ್ದಾರೆ.

ಪ್ರವೀಣ್ ಪೂಜಾರಿ ಹತ್ಯೆ ಹಿಂದೆ ಮೇಲ್ನೋಟಕ್ಕೆ ಕೆಲ ವ್ಯಕ್ತಿಗಳ ಕೈವಾಡ ಇರುವುದು ಕಂಡು ಬಂದರೂ ಕೂಡ ಅದರ ಹಿಂದೆ ಒಂದು ಕೊಲೆಗಡುಕ ಸಿದ್ಧಾಂತವಿದೆ. ಕುಸಿಯುತ್ತಿರುವ ಬ್ರಾಹ್ಮಣ್ಯದ ಕೋಟೆ ರಕ್ಷಿಸಿಕೊಳ್ಳಲು ಹಿಂದುತ್ವವನ್ನು ಅಸವಾಗಿ ಬಳಸಿಕೊಳ್ಳುತ್ತಿರುವ ಹೆಡಗೆವಾರ್, ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅನುಯಾಯಿಗಳು ಇಂತಹ ಹತ್ಯೆಗಳ ಹಿಂದೆ ಇದ್ದಾರೆ. ಶೂದ್ರ ಸಮುದಾಯದ ಅಮಾಯಕ ಯುವಕರನ್ನು ಬಳಸಿಕೊಂಡು ಇವರು ಈ ದುಷ್ಕೃತ್ಯ ಎಸಗುತ್ತಾರೆ.
ಇಲ್ಲಿನ ಕಾರ್ಪೊರೇಟ್ ಬಂಡವಾಳಶಾಹಿಗೂ ತಮ್ಮ ಸೇವೆ ಸಲ್ಲಿಸುವ ಇಂತಹ ನಕಲಿ ದೇಶಪ್ರೇಮಿಗಳು ಬೇಕು. ದೇಶದ ನೆಲ, ಜಲ ಮತ್ತು ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಈ ದಗಾಕೋರರ ವಿರುದ್ಧ ಸಂಘ ಪರಿವಾರ ಎಂದಿಗೂ ದನಿಯೆತ್ತುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದಾಗ, ಗಣಿರೆಡ್ಡಿಗಳು ಬಳ್ಳಾರಿಯ ಖನಿಜ ಸಂಪತ್ತನ್ನು ಕೊಳ್ಳೆ ಹೊಡೆದು ತಮ್ಮದೇ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದರು. ಆಗ ರಾಜ್ಯದ ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಇರಲಿಲ್ಲ. ಸಂಘ ಪರಿವಾರದ ದೃಷ್ಟಿಯಲ್ಲಿ ಸಂಪತ್ತಿನ ದರೋಡೆ ದೇಶದ್ರೋಹ ಎನ್ನಿಸಿಕೊಳ್ಳುವುದಿಲ್ಲ. ತಾನೇ ಪಾಕಿಸ್ತಾನದ ಬಾವುಟ ಹಾರಿಸಿ, ಮುಸ್ಲಿಮ್ ಯುವಕರು ಹಾರಿಸಿದ್ದಾರೆಂದು ಸುಳ್ಳಿನ ಕಂತೆ ಕಟ್ಟುವ ಇಂತಹ ಸಂಘಟನೆಗಳ ಬಗ್ಗೆ ನಮ್ಮನ್ನಾಳುತ್ತಿರುವ ಸರಕಾರಗಳು ಮೃದು ಧೋರಣೆ ತಾಳುತ್ತ ಬಂದಿವೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಸಂಘಟನೆಗಳು ಚಿಗುರಿಕೊಂಡವು. ಹಾಜಬ್ಬ, ಹಸನಬ್ಬ ಪ್ರಕರಣ ನಡೆದಾಗಲೇ ಕೊಲೆ ಮಾಡುವಂತಹ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ.

ಆದರೆ ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತ ರಕ್ಷಿಸುವ ನಮ್ಮ ಸರಕಾರಗಳಿಗೆ ಇಂತಹ ಮಾನವವಿರೊ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವುದು ಬೇಕಾಗಿಲ್ಲ. ಬಂಡವಾಳಶಾಹಿ ಲೂಟಿಯ ವಿರುದ್ಧ ಪುರೋಹಿತಶಾಹಿಯ ಕೊಳ್ಳೆಯ ವಿರುದ್ಧ ಯುವಕರು ತಿರುಗಿ ಬೀಳಬಾರದೆಂದು ಅವರನ್ನು ಪರಸ್ಪರ ಹೊಡೆದಾಟಕ್ಕೆ ಹಚ್ಚಿ ಆಳುವ ವರ್ಗ ತನ್ನ ಸ್ವಾರ್ಥ ಸಾಸಿಕೊಳ್ಳುತ್ತಿದೆ. ದೇಶವಿದೇಶದ ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತರಕ್ಷಿಸುವ ಆರೆಸ್ಸೆಸ್‌ಗೆ ಬಂಡವಾಳಗಾರರಿಂದ ಭಾರೀ ಪ್ರಮಾಣದ ಹಣ ದೇಣಿಗೆ ರೂಪದಲ್ಲಿ ಬರುತ್ತಿದೆ. ಇತ್ತೀಚೆಗೆ ಮೋದಿ ಸರಕಾರ ಸ್ವಯಂಸೇವಾ ಸಂಸ್ಥೆಗಳು ಪಡೆಯುತ್ತಿರುವ ವಿದೇಶಿ ದೇಣಿಗೆಯ ವಿವರ ಪ್ರಕಟಿಸಿತು. ಆದರೆ ರೆಸ್ಸೆಸ್ ಪಡೆಯುತ್ತಿರುವ ದೇಣಿಗೆ ಬಗ್ಗೆ ತನಿಖೆ ಮಾಡಲಿಲ್ಲ.
ಪದೇ ಪದೇ ದೇಶಪ್ರೇಮ ದೇಶಪ್ರೇಮವೆಂದು ಹೋರಾಡುವ ಇವರ ದೇಶದ್ರೋಹಕ್ಕೆ ಶತಮಾನಗಳ ಇತಿಹಾಸವಿದೆ. 12ನೆ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರಿಗೆ ಇವರು ಯಾವ ರೀತಿ ಚಿತ್ರಹಿಂಸೆ ನೀಡಿದರು. ಮಹಾರಾಷ್ಟ್ರದಲ್ಲಿ ಜಾತಿ ಶೋಷಣೆ ವಿರುದ್ಧ ಅಭಂಗಗಳನ್ನು ಬರೆದ ಸಂತ ತುಕರಾಮ ಅವರ ಪುಸ್ತಕಗಳನ್ನು ನೀರಿನಲ್ಲಿ ಮುಳುಗಿಸಿ, ಅವರನ್ನು ಹೇಗೆ ಕೊಂದರು. ಸಂತ ಜ್ಞಾನೇಶ್ವರ ಅವರಿಗೆ ಚಿತ್ರಹಿಂಸೆ ನೀಡಿ ಹೇಗೆ ಕೊಂದರು. ಶೂದ್ರರಿಗೆ, ಮಹಿಳೆಯರಿಗೆ ಅಕ್ಷರ ಕಲಿಸಲು ಹೊರಟ ಜ್ಯೋತಿಭಾ ುಲೆ, ಸಾವಿತ್ರಿಬಾಯಿ ುಲೆಗೆ ಯಾವ ರೀತಿ ಕಿರುಕುಳ ನೀಡಿದರು. ಇವರುಗಳ ಇತಿಹಾಸ ಬಯಲಿಗಿಟ್ಟರೆ, ಇವರು ನಡೆದು ಬಂದ ದ್ರೋಹದ ದಾರಿ ಗೊತ್ತಾಗುತ್ತದೆ.

ನಮ್ಮ ಮಾಧ್ಯಮಗಳು ಹೇಗಿವೆ ಎಂಬುದು ಈಗಾಗಲೇ ಬಟಾಬಯಲಾಗಿದೆ, ದೇಶಪ್ರೇಮದ ಹೆಸರಿನಲ್ಲಿ ಇವರು ಮಾಡುವ ಪುಂಡಾಟಿಕೆಯನ್ನು ವೈಭವೀಕರಿಸುವ ಮಾಧ್ಯಮಗಳಿಗೆ ಪ್ರವೀಣ್ ಪೂಜಾರಿಯಂತಹವರ ಹತ್ಯೆ ಮಹತ್ವ ಎನಿಸಿಕೊಳ್ಳುವುದಿಲ್ಲ. ಇಂತಹ ಮಾಧ್ಯಮಗಳನ್ನು ಬಳಸಿಕೊಳ್ಳುವ ನಿರೀಕ್ಷೆಯನ್ನು ಪ್ರಗತಿಪರರು ಇಟ್ಟುಕೊಳ್ಳದೇ ತಮ್ಮದೇ ಪರ್ಯಾಯ ಮಾಧ್ಯಮ ಕಟ್ಟಿಕೊಳ್ಳಬೇಕಿದೆ.
ಭಾರತ ಇಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈ ದೇಶ ಹಿಟ್ಲರ್, ಗೋಳ್ವಾಲ್ಕರ್, ಸಾವರ್ಕರ್ ಹಾದಿಯಲ್ಲಿ ಸಾಗಬೇಕೋ ಅಥವಾ ಬುದ್ಧ, ಬಸವಣ್ಣ, ಅಂಬೇಡ್ಕರ್ ಅಥವಾ ಭಗತ್ ಸಿಂಗ್ ತೋರಿದ ಹಾದಿಯಲ್ಲಿ ಸಾಗಬೇಕೋ ಎಂಬುದನ್ನು ತೀರ್ಮಾನಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಅದಕ್ಕೂ ಮುನ್ನ ಸೈಕೋಪಾತ್, ಕೊಲೆಗಡುಕರಾಗುತ್ತಿರುವ ಯುವಕರನ್ನು ಸರಿ ದಾರಿಗೆ ತರಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X