Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...!

ಓ ಮೆಣಸೇ...!

ವಾರ್ತಾಭಾರತಿವಾರ್ತಾಭಾರತಿ22 Aug 2016 12:04 AM IST
share

  ಗೋರಕ್ಷಕರ ಬಗ್ಗೆ ಮೋದಿ ಹೇಳಿಕೆ ಸಂಕಟ ತಂದಿದೆ

  -ಪ್ರವೀಣ್ ತೊಗಾಡಿಯಾ,

ವಿಹಿಂಪ ಅಧ್ಯಕ್ಷ ಗೋವುಗಳಿಗೆ ಖುಷಿ ತಂದಿದೆಯಂತೆ.
---------------------
  ದಲಿತರ ಮೇಲಿನ ಹಲ್ಲೆ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ
-ಪ್ರಣವ್ ಮುಖರ್ಜಿ, ರಾಷ್ಟ್ರಪತಿ
  ಸಂವಿಧಾನ ತಿದ್ದುಪಡಿ ಮಾಡಿದರಾಯಿತು ಎನ್ನುತ್ತಿದ್ದಾರೆ ಆರೆಸ್ಸೆಸ್ ನಾಯಕರು.
---------------------
  ದೇಶದ ನಾಗರಿಕರು ಅತ್ಯಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು.
-ಅಮಿತಾಭ್ ಬಚ್ಚನ್, ನಟ
  ಅತ್ಯಾಚಾರ ಮುಕ್ತ ಸಿನೆಮಾ ಮಾಡುವುದಕ್ಕೆ ತಾವೇಕೆ ಪ್ರತಿಜ್ಞೆ ಮಾಡಬಾರದು?
---------------------
  ಕಾಶ್ಮೀರಕ್ಕಾಗಿ ಸಾವನ್ನಪ್ಪಿದವರ ಬಲಿದಾನ ವ್ಯರ್ಥವಾಗುವುದಿಲ್ಲ
-ಅಬ್ದುಲ್ ಬಾಸಿತ್, ಪಾಕ್ ರಾಯಭಾರಿ
  ಪಾಕಿಸ್ತಾನಕ್ಕಾಗಿ ಮಾಡಿದ ಬಲಿದಾನ ವ್ಯರ್ಥವಾದ ಬಗ್ಗೆ ತುಸು ಯೋಚಿಸಿ.
---------------------
  ಜೀವಿಗಳಲ್ಲಿ ಗೋವು ಶ್ರೇಷ್ಠ.
-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಗೋವು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದಿಲ್ಲ.
---------------------
  ದೇಶವಿರೋ ಚಟುವಟಿಕೆ ನಡೆಸುತ್ತಿರುವ ಸಂಘಟನೆಗಳನ್ನು ಸಮಾಜ ಸಹಿಸುವುದಿಲ್ಲ.
-ಸುನೀಲ್ ಕುಮಾರ್, ಶಾಸಕ
  ಹೌದು. ಅದರಿಂದಲೇ ನೀವು ಸದ್ಯ ಸಮಾಜದಿಂದ ದೂರವಾಗುತ್ತಿರುವುದು.
---------------------
  ದೇಶಕ್ಕಾಗಿ ಒಬ್ಬ ಮಗನನ್ನು ಸಂತ ಅಥವಾ ಸೈನಿಕನನ್ನಾಗಿ ಮಾಡಿ
-ವಿಶ್ವೇಶ ತೀರ್ಥಸ್ವಾಮೀಜಿ, ಪೇಜಾವರ ಮಠ
  ತಮ್ಮ ಮಗನನ್ನು ಏನು ಮಾಡಿದ್ದೀರಿ ಎನ್ನುವುದನ್ನು ದೇಶಕ್ಕೆ ಮೊದಲು ತಿಳಿಸಿ.

---------------------
 ಕಾಶ್ಮೀರವನ್ನು ಮತ್ತೊಂದು ಸಿರಿಯಾ ಆಗಲು ಬಿಡುವುದಿಲ್ಲ.
-ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ
  ಸದ್ಯಕ್ಕೆ ಇನ್ನೊಂದು ಕಾಶ್ಮೀರ ಆಗದ ಹಾಗೆ ನೋಡಿಕೊಳ್ಳಿ.

---------------------
 ವಾಜಪೇಯಿ ಹಾಗೂ ಮೋದಿ ನೇತೃತ್ವದ ಆಡಳಿತಾವ ಶ್ರೇಷ್ಠ ಯುಗವಾಗಿದೆ
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
  ತ್ರೇತಾಯುಗದ ಶ್ರೀರಾಮ ನಿಮ್ಮ ಮಾತಿಗೆ ಅಚ್ಚರಿಗೊಂಡಿರಬೇಕು.
---------------------
 ನಮ್ಮ ಮಕ್ಕಳು ಹಾಗೂ ಯುವ ಜನಾಂಗಕ್ಕೆ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದವರ ಬಗ್ಗೆ ತಿಳಿಯಪಡಿಸಬೇಕಾಗಿದೆ
-ಶೋಭಾ ಕರಂದ್ಲಾಜೆ, ಸಂಸದೆ
  ಯಡಿಯೂರಪ್ಪರ ಬಲಿದಾನಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿದರಾಯಿತು.

---------------------
  ಬಿಜೆಪಿ ನನಗೆ ತಾಯಿ ಇದ್ದಂತೆ
-ಈಶ್ವರಪ್ಪ, ಮೇಲ್ಮನೆ ಪ್ರ.ಪ.ನಾಯಕ
  ಮೊಲೆ ಹಾಲು ಕುಡಿಯುವುದು ಇನ್ನೂ ಬಿಟ್ಟಿಲ್ಲ ಎನ್ನುವುದು ವರಿಷ್ಠರ ಆರೋಪ.

---------------------
   ಪಾಕಿಸ್ತಾನಕ್ಕೆ ಭೇಟಿ ನೀಡುವುದೆಂದರೆ ನರಕಕ್ಕೆ ಹೋದಂತೆ
-ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
  ನರೇಂದ್ರ ಮೋದಿಯವರಿಗೆ ನರಕದ ಬಿರಿಯಾನಿ ಎಂದರೆ ತುಂಬಾ ಇಷ್ಟವಂತೆ.
---------------------
  ಭಾರತೀಯರು ಅಹಂ ಬಿಡಬೇಕು
-ನಾರಾಯಣ ಮೂರ್ತಿ, ಇನೊಓಂೀಸಿಸ್ ಸಹಸಂಸ್ಥಾಪಕ
ಅಹಂ ಬ್ರಹ್ಮಾಸ್ಮಿ ಎನ್ನುವ ಶಬ್ದಕ್ಕೆ ಭಾರತ ಪೇಟೆಂಟ್ ತೆಗೆದುಕೊಂಡಿದೆ.

---------------------
  ಮುಂದಿನ ದಿನಗಳಲ್ಲಿ ಯಮುನೆ ಮಾಲಿನ್ಯದಿಂದ ಮುಕ್ತಳಾಗಿ ಸುಂದರಿಯಾಗಲಿದ್ದಾಳೆ
-ನಿತಿನ್ ಗಡ್ಕರಿ, ಕೇಂದ್ರ ಸಚಿವ
  ಯಾವ ಕಂಪೆನಿಗೆ ಅವಳನ್ನು ಮದುವೆ ಮಾಡಿಕೊಡಬೇಕು ಎಂದಿದ್ದೀರಿ?
---------------------
  ಜನರ ಆಶೀರ್ವಾದ ಇದ್ದರೆ ಜೆಡಿಎಸ್ ಮತ್ತೆ ಅಕಾರಕ್ಕೆ ಬರುತ್ತೆ
-ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
  ಜನರು ಆಶೀರ್ವದಿಸದಿದ್ದರೆ, ಬಿಜೆಪಿಯ ಆಶೀರ್ವಾದದಿಂದಲಾದರೂ ಅಕಾರಕ್ಕೆ ಬರುವ ಯೋಜನೆ ಹಾಕಿಕೊಂಡಂತಿದೆ.
---------------------
  ನನ್ನನ್ನು ಸಂಪುಟದಿಂದ ಕೈ ಬಿಟಿದ್ದಕ್ಕೆ ಉಂಟಾಗಿರುವ ನೋವು ಇನ್ನೂ ಶಮನವಾಗಿಲ್ಲ
-ಖಮರುಲ್ ಇಸ್ಲಾಂ, ಮಾಜಿ ಸಚಿ
  ನೋವಿನ ಜಾಗಕ್ಕೆ ಪತಂಜಲಿ ಎಣ್ಣೆ ಹಚ್ಚಿ.

---------------------
  ಕಾಂಗ್ರೆಸ್ ಅಂಬಾನಿ ಜೇಬಿನಲ್ಲಿತ್ತು, ಮೋದಿ ಸರಕಾರ ಅದಾನಿ ಜೇಬಿನಲ್ಲಿದೆ
-ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
  ನಿಮಗೆ ಅವಿತುಕೊಳ್ಳಲು ಜೇಬುಗಳೇ ಇಲ್ಲ ಎಂಬ ಖೇದವೇ?
---------------------
  ಸಂಘಟನಾ ಶಕ್ತಿ ನಮ್ಮಲ್ಲಿದ್ದರೆ ಜನ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ
-ಆಸ್ಕರ್ ೆರ್ನಾಂಡಿಸ್, ರಾಜ್ಯ ಸಭಾ ಸದಸ್ಯ
  ಸದ್ಯಕ್ಕೆ ನೀವೇ ಜನರನ್ನು ಹುಡುಕಿಕೊಂಡು ಹೋಗುವ ಗತಿ ಬಂದಿದೆ.

---------------------
  ದೇಶ ವಿಭಜನೆಗೆ ಗಾಂೀಜಿ ಒಪ್ಪಿರಲಿಲ್ಲ
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ಅದಕ್ಕೆ ಅವರನ್ನು ಕೊಲ್ಲಿಸಲಾಯಿತೇ?
---------------------
  ನಾನು ಅಭಿವೃದ್ಧಿ ವಿರೋಯಲ್ಲ
-ದೇವೇಗೌಡ, ಮಾಜಿ ಪ್ರಧಾನಿ
  ಬರೇ ಸಿದ್ಧರಾಮಯ್ಯ ಅವರ ವಿರೋ ಮಾತ್ರ ಎಂದರ್ಥವೇೆ?
---------------------
  ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಕ್ಕೂ ಸಿದ್ಧ, ತತ್ವಗಳಲ್ಲಿ ಯಾವುದೇ ರಾಜಿ ಇಲ್ಲ
-ನರೇಂದ್ರ ಮೋದಿ, ಪ್ರಧಾನಿ
  ಇಷ್ಟು ಬೇಗ ಪ್ರಧಾನಿ ಹುದ್ದೆಯಿಂದ ಸುಸ್ತಾಗಿ ಹೋಯಿತೇ?
---------------------
  ಬಿಜೆಪಿ ಈಗ ಉತ್ತುಂಗದಲ್ಲಿದೆ
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಬೀಳುವ ಅಂತರ ಹೆಚ್ಚಾಗಿದೆ.

---------------------
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X