ಹಿಂದೂಗಳಿಗೆ ಹೆಚ್ಚು ಮಕ್ಕಳಾಗಬೇಕು: ಆರೆಸ್ಸೆಸ್

ಹೊಸದಿಲ್ಲಿ, ಆ.22: ಹಿಂದೂ ದಂಪತಿಗಳು ಹೆಚ್ಚುಹೆಚ್ಚು ಮಕ್ಕಳನ್ನು ಹೆರಬೇಕೆಂದು ಆರೆಸ್ಸೆಸ್‌ಹೇಳಿದೆ. ನವದಂಪತಿಗಳಿಗಾಗಿ ಆಯೋಜಿಸಲಾಗಿದ್ದ ಸಮಾವೇಶವೊಂದರಲ್ಲಿ ಮಾತನಾಡಿದ ಆರೆಸ್ಸೆಸ್ ಕಾರ್ಯಕರ್ತ ದರ್ಪಣ್, ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾ, ಸಮಾಜಕ್ಕಾಗಿ, ನಮ್ಮ ಸಂಸ್ಕೃತಿ ಹಾಗೂ ಜನಾಂಗಕ್ಕಾಗಿ ಹೆಚ್ಚು ಮಕ್ಕಳನ್ನು ಹೊಂದುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಹೇಳಿದ್ದಾರೆ. ಯುರೋಪ್ ಖಂಡ ಹಾಗೂ ಇತರ ದೇಶಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಬಿಂಬಿಸುವ ಒಂದು ವೀಡಿಯೊವನ್ನೂ ಸಮಾವೇಶದ ಸಂದರ್ಭ ಪ್ರದರ್ಶಿಸಲಾಯಿತು.
‘‘ಫ್ರಾನ್ಸ್ ದೇಶದ ಮೂಲ ನಾಗರಿಕರ ಸಂತಾನೋತ್ಪತ್ತಿ ಪ್ರಮಾಣ 1.8 ಆಗಿದ್ದರೆ, ‘ಇನ್ನೊಂದು ಸಮುದಾಯ’ದ ಜನಸಂಖ್ಯೆ ಹೆಚ್ಚಳ ಪ್ರಮಾಣ 8.1 ಆಗಿದೆ. ಇದರರ್ಥ ಫ್ರಾನ್ಸ್‌ನ ಮೂಲ ನಿವಾಸಿಗಳು ಮುಂದಿನ 25 ವರ್ಷಗಳಲ್ಲಿ ಣ್ಮರೆಯಾಗುತ್ತಾರೆ ಹಾಗೂ ‘ಇನ್ನೊಂದು ಸಮುದಾಯ’ದ ಮಂದಿ ಅವರ ಬದಲು ಫ್ರಾನ್ಸ್ ದೇಶದ ಮುಖ್ಯ ನಾಗರಿಕರಾಗುತ್ತಾರೆ’’ ಎಂದು ದರ್ಪಣ್ ಹೇಳಿದರು. ಅಲ್ಲಿನ ಪರದೆಯೊಂದರಲ್ಲಿ ತೋರಿಸಲಾಗುತ್ತಿದ್ದ ಸ್ಲೈಡ್‌ಗಳು ‘‘ಇನ್ನೊಂದು ಸಮುದಾಯ’’ವನ್ನು ಮುಸ್ಲಿಮರು ಎಂದು ತೋರಿಸುತಿತ್ತು.
ಅಂತೆಯೇ ರಷ್ಯ, ಬ್ರಿಟನ್ ಹಾಗೂ ಜರ್ಮನಿಗಳಲ್ಲೂ ‘‘ಹೆಚ್ಚುತ್ತಿರುವ’’ ಮುಸ್ಲಿಮರ ಜನಸಂಖ್ಯೆಯ ಬಗ್ಗೆ ವೀಡಿಯೊದಲ್ಲಿ ಹೇಳಲಾಗಿದ್ದು ‘‘ಕುಸಿಯುತ್ತಿರುವ ಜರ್ಮನಿಯ ಜನಸಂಖ್ಯೆಯನ್ನು ಹೆಚ್ಚಿಸಲು ಇನ್ನು ಸಾಧ್ಯವಿಲ್ಲ. ಅದು 2050ರ ಹೊತ್ತಿಗೆ ಮುಸ್ಲಿಮ್ ದೇಶವಾಗಲಿದೆ ಎಂದು ಅವರು ಹೇಳಿದರು.
ಆದರೆ ಮಹಿಳೆಯೊಬ್ಬಳು ಕೇಳಿದ ಪ್ರಶ್ನೆಗೆ ಆರೆಸ್ಸೆಸ್ ಮುಖ್ಯಸ್ಥರು ಉತ್ತರಿಸಿಲ.್ಲ ‘‘ನಮ್ಮ ಸೀಮಿತ ಸಂಪನ್ಮೂಲಗಳಿಂದ ನಾವು ಹೇಗೆ ಹೆಚ್ಚು ಮಕ್ಕಳನ್ನು ಸಾಕಲು ಸಾಧ್ಯ?’’ ಎಂಬ ಆ ಮಹಿಳೆಯ ಪ್ರಶ್ನೆಗೆ ಅವರಿಂದ ಉತ್ತರವಿರಲಿಲ್ಲ. ವೀಡಿಯೋದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನಿಸಿದಾಗ ‘‘ಅದು ಯೂಟ್ಯೂಬ್‌ನಲ್ಲಿ ಸುಲಭವಾಗಿ ಲಭ್ಯವಿದೆ’’ ಎಂಬ ಉತ್ತರ ಆರೆಸ್ಸೆಸ್ ಕಾರ್ಯಕರ್ತರಿಂದ ದೊರೆಯಿತು.







