ಆ.24ರಂದು ಬೆಳ್ತಂಗಡಿಗೆ ಅತ್ತಿಪ್ಪಟ್ಟ ಉಸ್ತಾದ್
ಬೆಳ್ತಂಗಡಿ, ಆ.22: ಇಲ್ಲಿನ ದಾರುಸ್ಸಲಾಂ ದಅ್ವಾ ಕಾಲೇಜು ವತಿಯಿಂದ ನಡೆಸಲ್ಪಡುವ ಮಜ್ಲಿಸುನ್ನೂರು ಉದ್ಘಾಟನಾ ಸಮಾರಂಭ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮ ಆ.24ರಂದು ಮಗ್ರಿಬ್ ನಮಾಝ್ ನಂತರ ಬೆಳ್ತಂಗಡಿ ಕೇಂದ್ರ ಜುಮಾ ಮಸೀದಿಯಲ್ಲಿ ಜರಗಲಿದೆ.
ಈ ಕಾರ್ಯಕ್ರಮದ ನೇತೃತ್ವವನ್ನು ಖ್ಯಾತ ಪಂಡಿತ ಶೈಖುನಾ ಅತ್ತಿಪ್ಪಟ್ಟ ಉಸ್ತಾದ್ ವಹಿಸಲಿದ್ದಾರೆ. ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಬಾಬ್ ತಂಙಳ್ ಉದ್ಘಾಟ ನೆರವೇರಿಸುವರು. ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ತ್ವಾಹಾ ತಂಙಳ್, ಅಲಿ ತಂಙಳ್ ಕರಾವಳಿ, ಬದ್ರುದ್ದೀನ್ ತಂಙಳ್ ಮಂಜೇಶ್ವರ ಮೊದಲಾದ ಸಾದಾತ್‌ಗಳು, ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸಮಿತಿ ಪತ್ರಿಕಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





