ಸೋಮಾಲಿಯದಲ್ಲಿ ಆತ್ಮಾಹುತಿ ದಾಳಿ: 20 ಮಂದಿ ಮೃತ್ಯು

ಮೊಗದಿಶು,ಆ.22: ಸೋಮಾಲಿಯ ಸರಕಾರಿ ಕೇಂದ್ರದಲ್ಲಿ ನಡೆದ ಅವಳಿ ಆತ್ಮಾಹುತಿ ದಾಳಿಯಲ್ಲಿ 20 ಮಂದಿ ಹತರಾಗಿದ್ದು 30 ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.ಮೃತರಲ್ಲಿ ಜನಸಾಮಾನ್ಯರು ಹಾಗೂ ಭದ್ರತಾ ಉದ್ಯೋಗಿಗಳು ಸೇರಿದ್ದಾರೆ. ದೇಶದ ಪುಂಟಲಾಂಟ್‌ನಲ್ಲಿ ನಿನ್ನೆ ಆತ್ಮಾಹುತಿ ದಾಳಿ ನಡೆದಿತ್ತು. ದಾಳಿಯ ಹೊಣೆಯನ್ನು ಸೋಮಾಲಿಯದ ಸಶಸ್ತ್ರ ಬಂಡುಕೋರ ಸಂಘಟನೆಯಾದ ಅಲ್‌ಶಬಾಬ್ ಭಯೋತ್ಪಾದಕರು ವಹಿಸಿಕೊಂಡಿದ್ದಾರೆಂದು ವರದಿ ತಿಳಿಸಿದೆ.
ಭಯೋತ್ಪಾದಕರು ಮೊದಲು ಟ್ರಕ್ ಹಾಗೂ ನಂತರ ಕಾರನ್ನು ನುಗ್ಗಿಸಿದ ಬಳಿಕ ಭಾರೀ ಗುಂಡು ಹಾರಾಟವನ್ನು ನಡೆಸಿದರು ಎಂದು ಪ್ರದೇಶವಾಸಿಯಾದ ಹಲೀಮಾ ಇಸ್ಮಾಯೀಲ್ ಎಂಬವರು ಹೇಳಿದ್ದಾರೆ.ಸೋಮಾಲಿಯ ಭದ್ರತಾಸೇನೆ ಮತ್ತು ಆಫ್ರಿಕನ್ ಯೂನಿಯನ್ ಸೇನೆ ಅಲ್‌ಶಬಾಬ್ ವಿರುದ್ಧ ಹೋರಾಟವನ್ನು ಬಲಿಷ್ಟಗೊಳಿಸಿರುವ ಉತ್ತರ ಸೋಮಾಲಿಯದ ಪುಂಟ್‌ಲಾಂಟ್ ಪ್ರಾಂತ ಅಲ್‌ಶಬಾಬ್ ಭಯೋತ್ಪಾದಕರು ವ್ಯಾಪಕ ಚಟುವಟಿಕೆಗಳು ನಡೆಸುವ ಪ್ರದೇಶವಾಗಿದೆ ಎಂದು ವರದಿ ತಿಳಿಸಿದೆ.
Next Story





