ಬಜಾಲ್ ರೈಲ್ವೇ ಕೆಳಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪಾದಯಾತ್ರೆ
ಮಂಗಳೂರು, ಆ.22: ಪಡೀಲು ಬಜಾಲ್ ರೈಲ್ವೆ ಕೆಳಸೇತುವೆ ಮೂಲಕ ಬಜಾಲ್, ಜಲ್ಲಿಗುಡ್ಡೆ, ಫೈಸಲ್‌ನಗರ, ವಿಜಯನಗರ, ಅಳಪೆ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಯನ್ನು ಕೂಡಲೇ ಸರಿಪಡಿಸಲು ಒತ್ತಾಯಿಸಿ ವೈಎಫ್‌ಐ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಾದಯಾತ್ರೆ ಮೆರವಣಿಗೆ ಇಂದು ನಡೆಯಿತು.
ಕೆಳಸೇತುವೆಯ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಇಂಜಿನಿಯರ್ ಗಳನ್ನು ತನಿಖೆಗೆ ಒಳಪಡಿಸಬೇಕು ಎಂದೂ ಆಗ್ರಹಿಸಿ ಪ್ರತಿಭಟನಾಕಾರರು ಪಡೀಲ್‌ನಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಮನಪಾ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿ, ರೈಲ್ವೇ ಕೆಳಸೇತುವೆಯ ಅಸಮರ್ಪಕ ಕಾಮಗಾರಿಯಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಹಿರಿಯ ಮುಖಂಡರಾದ ಬಿ.ಎಂ. ಮಾಧವ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಜಿಲ್ಲಾ ಉಪಾದ್ಯಕ್ಷರಾದ ಬಿ.ಕೆ.ಇಮಿತಿಯಾಜ್, ಸಾದಿಕ್ ಕಣ್ಣೂರು, ಪ್ರೇಮ್‌ನಾಥ್ ಜಲ್ಲಿಗುಡ್ಡೆ, ಬಶೀರ್ ಜಲ್ಲಿಗುಡ್ಡೆ, ಸುರೇಶ್ ಬಜಾಲ್, ಅನ್ಸಾರ್, ಶಾಂತ, ರೋಹಿಣಿ ಮುಂತಾದವರು ಉಪಸ್ಥಿತರಿದ್ದರು.





