ಮಗನ ಹೆಸರು ಹೇಳಿ ರೈತ ಆತ್ಮಹತ್ಯೆ ವಿಚಾರ ಗೊತ್ತಿಲ್ಲ: ಡಿಜಿಪಿ ಓಂ ಪ್ರಕಾಶ್

ಮಂಗಳೂರು, ಆ.22: ಮಾಗಡಿಯಲ್ಲಿ ತನ್ನ ಪುತ್ರನ ಹೆಸರು ಹೇಳಿಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಚಾರ ತನಗೇನೂ ಗೊತ್ತಿಲ್ಲ ಎಂದು ಡಿಜಿಪಿ ಓಂಪ್ರಕಾಶ್ ಹೇಳಿದ್ದಾರೆ.
ಅವರು ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ಮಗ 10- 15 ದಿನಗಳಿಂದ ವಿದೇಶದಲ್ಲಿದ್ದಾನೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ರಾಮನಗರ ಎಸ್ಪಿ ಬಳಿ ಕೇಳಬಹುದು. ನನಗೆ ಇದರ ಅರಿವಿಲ್ಲ ಎಂದರು.
ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಮುತುವರ್ಜಿಯಿಂದ ತನಿಖೆ ನಡೆಸುತ್ತಿದಾದರೆ. ಇನ್ನೊಂದು ತಿಂಗಳಲ್ಲಿ ವರದಿ ನೀಡಬಹುದು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನೂ ಸಿಐಡಿ ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಓಂಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
Next Story





