ಕೋಮುವಾದಿಗಳನ್ನು ಹತ್ತಿಕ್ಕಲು ಶಾಂತಿಯ ಅಭಿಯಾನ ಅವಶ್ಯ : ಭಾಸ್ಕರ್ ನಾಯ್ಕ

ಭಟ್ಕಳ,ಆ.22: ದೇಶದಲ್ಲಿ ಕೋಮುವಾದಿಗಳು ತಮ್ಮಅಟ್ಟಹಾಸವನ್ನು ಮೆರೆಯುತ್ತಿದ್ದುಅಶಾಂತಿಯ ವಾತವರಣ ಸೃಷ್ಟಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಶಾಂತಿ ಮತ್ತು ಮಾನವೀಯತೆ ಅಭಿಯಾನ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ ಶಾಂತಿ ಮತ್ತು ಮಾನವೀಯತೆ ಅಭಿಯಾನ ತಾಲೂಕು ಸಮಿತಿಯ ಭಾಸ್ಕರ್ ನಾಯ್ಕ ಹೇಳಿದರು.
ಅವರು ಇಲ್ಲಿನ ಶ್ರೀನಿವಾಸ್ ಹೋಟೆಲ್ ನಲ್ಲಿ ಶಾಂತಿ ಮತ್ತು ಮಾನವೀಯತೆ ಅಭಿಯಾನ ತಾಲೂಕು ಸ್ವಾಗತ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಭಾರತ ಶಾಂತಿ ಸೌಹಾರ್ಧತೆಯ ದೇಶವಾಗಿದ್ದು ಇದನ್ನುಕೆಡಿಸುವ ಪ್ರಯತ್ನಗಳು ದೇಶಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವುದು ದುರಾಷ್ಟಕರ ಎಂದ ಅವರು ಈ ದೇಶದಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸಿದರೆ ಮಾತ್ರ ಅಭಿವೃದ್ದಿ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಆಭಿಯಾನದ ಜಿಲ್ಲಾ ಸಮಿತಿಯ ಸಂಚಾಲಕ ಎಂ.ಆರ್. ಮಾನ್ವಿ ಮಾತನಾಡಿ ಶಾಂತಿ ಭಂಜಕರೇ ಈ ದೇಶದ ವೈರಿಗಳಾಗಿದ್ದು ನಾವು ಈ ದೇಶವನ್ನು ಶಾಂತಿ ಭಂಜಕರಿಂದ ಬಹುದೂರ ಕೊಂಡೊಯ್ಯಲು ಬಯಸುತ್ತೇವೆ. ಸ್ವಾತಂತ್ರ್ಯಪೂರ್ವದಲ್ಲಿದ್ದ ಭಾರತದ ಸೌಹಾರ್ಧ ವಾತವರಣವನ್ನು ಮರು ಸೃಷ್ಟಿಸಲು ಈ ದೇಶದ ಶೇ.99 ಮಂದಿಯ ಪ್ರಯತ್ನವಾಗಿದ್ದು ದೇಶದ ಶೇ.1% ಜನರು ವಿಷಜಂತುಗಳಾಗಿ ದೇಶವನ್ನುಕಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಈ ದೇಶವನ್ನು ಶಾಂತಿ, ಸೌಹಾರ್ಧತೆಯತಾಣವನ್ನಾಗಿ ಮಾಡುವಂತೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
ಶಾಂತಿ, ನೆಮ್ಮದಿ ಇಲ್ಲದ ಮತ್ತು ಛಿದ್ರ ಸಮಾಜವು ಎಂದಿಗೂ ಆರ್ಥಿಕ ಪ್ರಗತಿ ಸಾಧಿಸಲಾರದು.ಈ ರೋಗವು ವ್ಯಾಪಕವಾದರೆ ದೇಶದೊಳಗೆ ಹರಿದು ಬರುವ ವಿದೇಶಿ ಬಂಡವಾಳವು ನಿಂತು ಬಿಡಬಹುದು ಮಾತ್ರವಲ್ಲ ದೇಶದ ಹೂಡಿಕೆದಾರರೇ ಬಂಡವಾಳ ಹೂಡಲು ವಿದೇಶದಲ್ಲಿ ಅವಕಾಶವನ್ನು ಹುಡುಕಬಹುದು.ಪ್ರಸಕ್ತಆರ್ಥಿಕ ಚಟುವಟಿಕೆಗಳು, ವ್ಯಾಪಾರ, ಉದ್ದಿಮೆಗಳು ನಷ್ಟ ಹೊಂದಿ ಆರ್ಥಿಕ ಕುಸಿತ, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳು ಸೃಷ್ಟಿಯಾಗಬಹುದು.ಈ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಪ್ರಥಮತಃ ದೇಶವಾಸಿಗಳಾದ ನಾವೆಲ್ಲರೂ ಪರಿಸ್ಥಿತಿಯ ಗಂಭೀರತೆಯನ್ನುಅರಿಯಬೇಕು.ಖಂಡಿತವಾಗಿಯೂ ಇಡೀ ದೇಶದ ವಾತಾವರಣವು ಅಸಹನೀಯವಾಗಿಲ್ಲ. ಸಹಿಷ್ಣುತೆ ಇಂದೂ ನಮ್ಮ ಸಮಾಜದ ವಿಶೇಷತೆಯಾಗಿದೆ.ಆದರೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಹಿಷ್ಣುತೆ ಬಗ್ಗೆ ನಾವು ಹೆಮ್ಮೆ ಪಡುವ ಕಾಲ ಹೆಚ್ಚು ಸಮಯ ಉಳಿಯಲಾರದು.ನಮ್ಮರಾಜಕೀಯ, ಧಾರ್ಮಿಕ ನಿಷ್ಠೆಗಳನ್ನು ಮೀರಿ ವಿಶಾಲವಾದ ಸಾಮಾಜಿಕ ನೆಲೆಯಲ್ಲಿ ಕೋಮುವಾದದ ವಿರುದ್ಧ ಒಗ್ಗಟ್ಟಾಗಿ ಕಾರ್ಯಾಚರಿಸಬೇಕಾಗಿದೆ.ಕೋಮು ಸೌಹಾರ್ದತೆಯನ್ನು ಸ್ಥಾಪಿಸಲು ಎಲ್ಲಾ ಕೋಮಿನ ಪ್ರಭಾವಿ ನಾಯಕರು ಮುಂದೆ ಬರಬೇಕಾಗಿದೆ.ಊರ ಪ್ರಮುಖರು, ಬುದ್ಧಿಜೀವಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರೆಲ್ಲರೂ ಇದರ ಪ್ರಾಮುಖ್ಯತೆಯನ್ನುಅರಿತು ಇದಕ್ಕೆ ಸೂಕ್ತ ಸ್ಥಾನವನ್ನು ನೀಡಬೇಕಾಗಿದೆ.ಇವೆಲ್ಲವುಗಳು ಧರ್ಮದ ಹೆಸರಿನಲ್ಲಿ ಅಥವಾ ಅದರ ದುರ್ಬಳಕೆಯಿಂದ ಆಗುತ್ತಿರುವುದರಿಂದ ಧಾರ್ಮಿಕ ನೇತಾರರು, ವಿದ್ವಾಂಸರು ಮತ್ತು ಆಧ್ಯಾತ್ಮಿಕ ಗುರುಗಳು ಇದರ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಬೇಕು ಎಂದರು.
ಭಟ್ಕಳದಲ್ಲಿ ವಿದ್ಯಾರ್ಥಿಗಳೀಂದ ಶಾಂತಿಯರ್ಯಾಲಿ, ಮನೆ ಮನೆಗೆ ಭೀಟಿ ನೀಡುವುದು, ಬೀದಿ ನಾಟಕ, ವಿಚಾರಗೋಷ್ಟಿ, ಗಣ್ಯ ಸಭೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸುವುದುರ ಮೂಲಕ ಶಾಂತಿ ಮಾನವೀಯತೆ ಸಂದೇಶ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಮುಜಾಹಿದ್ ಮುಸ್ತಫಾ, ಅಭಿಯಾನ ಸಂಚಾಲಕ ಮುಹಮ್ಮದ್ ಯುನೂಸ್‌ರುಕ್ನುದ್ದೀನ್, ಸದಸ್ಯರಾದ ಡಾ.ಆರ್.ವಿ.ಸರಾಫ್, ರಾಧಕೃಷ್ಣಭಟ್, ಜಿಲ್ಲಾ ಸಮಿತಿ ಸದಸ್ಯ ಕೆ.ಎಂ.ಷರೀಫ್ ಮುಂತಾದವರು ಉಪಸ್ಥಿತರಿದ್ದರು.







