ಬೋಳಿಯಾರ್: ಸಂಶುಲ್ ಹುದಾ ವಿದ್ಯಾರ್ಥಿ ಸಂಘ ರಚನೆ

ಕೊಣಾಜೆ,ಆ.22: ಬೋಳಿಯಾರ್ ಮದರಸದಲ್ಲಿ ಸಂಶುಲ್ ಹುದಾ ವಿದ್ಯಾರ್ಥಿ ಸಂಘ ರಚನಾ ಸಭೆ ಭಾನುವಾರ ಮದರಸ ಸಭಾಂಗಣದಲ್ಲಿ ನಡೆಯಿತು.
ಮಸೀದಿಯ ಖತೀಬ್ ಎನ್.ಅಬ್ದುಲ್ ರಹ್ಮಾನ್ ಫೈಝಿ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮದರಸ ಮುಖ್ಯ ಪ್ರಾಧ್ಯಾಪಕ ವಿ.ಟಿ.ಅಬ್ದುಸ್ಸಲಾಂ ಚಿಶ್ತಿ ದುವಾ ನೆರವೇರಿಸಿದರು. ಅಧ್ಯಾಪಕ ಬಿ.ಎಂ.ಅಲಿ ಮೌಲವಿ ಕಡ್ತಮುಗೇರು, ಎಂ.ಪಿ.ಉಮರ್ ಮುಸ್ಲಿಯಾರ್ ರಾಧುಕಟ್ಟೆ ಹಾಗೂ ಕೆ.ಮಹಮ್ಮದ್ ಮಸ್ಲಿಯಾರ್ ಕರಾಯ ಮಾತನಾಡಿದರು. ಇದೇ ಸಂದರ್ಭ 2016-17ನೇ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷ-ಅಬ್ದುಲ್ ರಹ್ಮಾನ್ ಫೈಝಿ, ಅಧ್ಯಕ್ಷ-ಅಹ್ಮದ್ ಬಶೀರ್, ಪ್ರಧಾನ ಕಾರ್ಯದರ್ಶಿ-ಜೌಹರ್ ಅಲಿ, ಕಾರ್ಯದರ್ಶಿಗಳು-ಕಬೀರ್, ಲುಕ್ಮಾನ್, ಕೋಶಾಧಿಕಾರಿ-ಸಫ್ವಾನ್, ಸಂಘಟನಾ ಕಾರ್ಯದರ್ಶಿ-ಅಸ್ವದ್. ಕಾರ್ಯಕಾರಿ ಸಮಿತಿ-ಶಮೀಮ್, ಸಂಶುದ್ದೀನ್, ನಝೀರ್ ಹಾಗೂ ನೌಷಾದ್ ಆಯ್ಕೆಗೊಂಡರು.
ಮದರಸ ವಿದ್ಯಾರ್ಥಿ ಅಹ್ಮದ್ ಬಶೀರ್ ಸ್ವಾಗತಿಸಿದರು. ಜೌಹರ್ ಅಲಿ ವಂದಿಸಿದರು.
Next Story





