Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹಜ್ಜಾಜ್ ಗಳ ಆಪತ್ಬಾಂಧವ ಡಾ. ಖಾಸಿಂ

ಹಜ್ಜಾಜ್ ಗಳ ಆಪತ್ಬಾಂಧವ ಡಾ. ಖಾಸಿಂ

ಮಕ್ಕಾ ಪ್ರವಾಸಿಗರ ಸೇವೆಯಲ್ಲಿ ನಮ್ಮೂರ ವೈದ್ಯ

-ರಶೀದ್ ವಿಟ್ಲ-ರಶೀದ್ ವಿಟ್ಲ22 Aug 2016 10:43 PM IST
share
ಹಜ್ಜಾಜ್ ಗಳ ಆಪತ್ಬಾಂಧವ ಡಾ. ಖಾಸಿಂ

ಡಾ. ಅಬಸದುಲ್ ಖಾಸಿಂ ಮೂಲತಃ ಕೇರಳ ಕರ್ನಾಟಕ ಗಡಿಪ್ರದೇಶವಾದ ಕನ್ಯಾನ-ಕರೋಪಾಡಿ ಸಮೀಪದ ಪೈವಳಿಕೆ ಪಂಚಾಯತ್ ಗೊಳಪಟ್ಟ ಕಾಡೂರು ನಿವಾಸಿ. ಒಂದು ಕಾಲದಲ್ಲಿ ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೃಷಿಕ ಅಹ್ಮದ್ ಅಲಿ ಕಂಬಾರ್ ಎಂಬವರ ಪುತ್ರ. ಖಾಸಿಂ ಬಳಿಕ ಉಪ್ಪಳದ ಕೈಕಂಬದಲ್ಲಿ ನಂತರ ಮಂಗಳೂರಿನ ಫಳ್ನೀರ್ ನಲ್ಲಿ ವಾಸ್ತವ್ಯ ಹೂಡಿದರು.

ಡಾ. ಖಾಸಿಂ ಕಮರ್ಷಿಯಲ್ ವೈದ್ಯರಲ್ಲ. ತನ್ನ ಹಿರಿಯರಿಂದ ಬಂದ ಸಮಾಜ ಸೇವೆ ಇವರನ್ನೂ ಆವರಿಸಿತು. ಉಪ್ಪಳದಲ್ಲಿ ಸೊಸೈಟಿ ಆಸ್ಪತ್ರೆ ಕೂಡಾ ಇವರ ಸಹಭಾಗಿತ್ವದ್ದೆ. ಮಂಗಳೂರಿನಲ್ಲಿ 2000 ದಿಂದ 2014 ರ ತನಕ ವೈದ್ಯ ಸೇವೆ ಮಾಡಿದರು. ಅವರ ಮಾನವೀಯತೆಯನ್ನು ಗುರುತಿಸಿದ ಮಂಗಳೂರಿನ "ಎಂ.ಫ್ರೆಂಡ್ಸ್" ತಂಡ ತನ್ನ ಗ್ರಾಮೀಣ ಪ್ರದೇಶದ ಮೆಡಿಕಲ್ ಸರ್ವೆಗೆ ಬಳಸಿಕೊಂಡಿತು. ನಂತರ ಎಂ.ಫ್ರೆಂಡ್ಸ್ ನ ವೈದ್ಯಕೀಯ ಸಲಹೆಗಾರರಾಗಿ ಅದರ ಟ್ರಸ್ಟಿಯೂ ಆದರು. ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡರು.

ಡಾ. ಖಾಸಿಂ ಮೃದುಸ್ವಭಾವದ ನಗುಮುಖದ ವ್ಯಕ್ತಿ. ಅಶಕ್ತರ ಪಾಲಿನ ಆಶಾಕಿರಣ. ಸಮಸ್ಯೆ ಇದ್ದಲ್ಲಿಗೆ ಧಾವಿಸಿ ಉಚಿತ ಚಿಕಿತ್ಸೆ ನೀಡುವುದಲ್ಲದೆ ಅದರ ಫಾಲೋಅಪ್ ಕೂಡಾ ಮಾಡುವ ಅಪರೂಪದ ವೈದ್ಯ. ರೋಗಿ ಅಸಹಾಯಕತನ ತೋರ್ಪಡಿಸಿದರೆ ತನ್ನ ಕಿಸೆಯಿಂದ ಹಣಕೊಟ್ಟು ಸಂತೈಸುವ ಕಾರುಣ್ಯಮೂರ್ತಿ. ಕಳೆದ ಎರಡೂವರೆ ವರ್ಷಗಳಿಂದ ಡಾ. ಖಾಸಿಂ ಸೌದಿ ಅರೇಬಿಯಾದ ಪವಿತ್ರ ಮಕ್ಕಾ ಸಮೀಪದ ಝಹರತ್ ಕುದಾಯಿಯ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ. ಅಲ್ಲಿ ವೃತ್ತಿ ಮಾಡುತ್ತಲೇ ಮಕ್ಕಾ ಪ್ರವಾಸಿಗರ ಉಚಿತ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಲ್ಲಿ "ನವೋದಯ" ಎನ್ನುವ ಹಜ್ ಸೇವಕರ ತಂಡವಿದೆ. ಮಕ್ಕಾದಲ್ಲಿ 100 ಸೇವಕರು ಹಜ್ಜಾಜ್ ಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನ್ವರ್ ತಿರುವನಂತಪುರ ಟೀಂ ಕ್ಯಾಪ್ಟನ್. ಡಾ. ಖಾಸಿಂ ಮುಖ್ಯ ಸಲಹೆಗಾರರು ಅಲ್ಲದೆ ತಂಡದ ಏಕಮಾತ್ರ ವೈದ್ಯ ಮತ್ತು ಸ್ವಯಂ ಸೇವಕರ ತರಬೇತುದಾರ. ಪ್ರತಿನಿತ್ಯ ಆಸ್ಪತ್ರೆ ಕೆಲಸದ ಮಧ್ಯೆಯೂ ಒಂದಷ್ಟು ತಾಸುಗಳನ್ನು ಹಗಲು-ರಾತ್ರಿ ನಿದ್ದೆಗೆಟ್ಟು ಹಾಜಿಗಳ ಸೇವೆಗೆ ಮುಡಿಪಾಗಿರಿಸಿದ್ದಾರೆ. ಕಳೆದ ವರ್ಷ ಕೂಡಾ ನೂರಾರು ಹಜ್ ಪ್ರವಾಸಿಗರ ಸೇವೆಯನ್ನು ಮಾಡಿದ್ದ ಡಾ. ಖಾಸಿಂ ಈ ಬಾರಿಯ ಹಜ್ ನಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಮಕ್ಕಾದಲ್ಲಿ ತುರ್ತು ಆವಶ್ಯಕತೆ ಇದ್ದಲ್ಲಿ ಡಾ. ಖಾಸಿಂ ಅವರ ಮೊಬೈಲ್ ನಂಬ್ರ; +9665 82249909 ಸಂಪರ್ಕಿಸಬಹುದು. ಅಕಸ್ಮಾತ್ ಅವರು ತುರ್ತು ಕೆಲಸದಲ್ಲಿರುವಾಗ ಫೋನ್ ಎತ್ತದೇ ಇದ್ದಲ್ಲಿ ಅವರಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಬಹುದು. ಅಥವಾ "ನವೋದಯ" ಸ್ವಯಂ ಸೇವಕರ ತಂಡದ ಕ್ಯಾಪ್ಟನ್ ಅನ್ವರ್ +9665 57910005, ಶಿಹಾಬ್ ಏಷಿಯನ್ +9665 59164445, ಶಬೀರ್ ಏಷಿಯನ್ +9665 36973895 ಅವರನ್ನು ಸಂಪರ್ಕಿಸಬಹುದು. ಡಾ.ಖಾಸಿಂ ಮತ್ತು ತಂಡದ ಸೇವೆಯನ್ನು ಅಲ್ಲಾಹನು ಸ್ವೀಕರಿಸಲಿ.

share
-ರಶೀದ್ ವಿಟ್ಲ
-ರಶೀದ್ ವಿಟ್ಲ
Next Story
X