ಚಂದ್ರನ್ ನಿಗೂಢ ಸಾವಿನ ಕ್ರೈಂ ಬ್ರಾಂಚ್ ತನಿಖೆಗೆ ಆಗ್ರಹಿಸಿ ಧರಣಿ

ಕಾಸರಗೋಡು, ಆ.23: ಉದುಮ ಬಾರ ಕಾಲನಿಯ ಚಂದ್ರನ್‌ರವರ ನಿಗೂಢ ಸಾವಿನ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಸುವಂತೆ ಒತ್ತಾಯಿಸಿ ನಾಗರಿಕ ಕ್ರಿಯಾ ಸಮಿತಿ ನೇತೃತ್ವದಲ್ಲಿಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಮಾನವ ಹಕ್ಕು ಕಾರ್ಯಕರ್ತ ಡಾ.ಸುರೇಂದ್ರನಾಥ್ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಇಬ್ರಾಹೀಂ ಮಾಂಗಾಡ್, ಅಂಬಲತ್ತರ ಕುಂಞಿಕೃಷ್ಣನ್, ಫಾರೂಕ್ ಚಾಲ, ಕಬೀರ್ ಮಾಂಗಾಡ್, ಶಿಬು ಕಡವಂಗಾನ, ಅಬ್ದುಲ್ ರಹ್ಮಾನ್, ಪ್ರೇಮಲತಾ, ಪ್ರಕಾಶ್ ಪನಾಯಲ್, ಮೋಹನನ್ ಮಾಂಗಾಡ್, ಶ್ಯಾಮಲಾ ಆರ್ಯಡ್ಕ ಮಾತನಾಡಿದರು.
ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಹೋರಾಟ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ತಡೆದರು.
Next Story





