ಕಳ್ಳಸಾಗಾಟಕ್ಕೆ ಯತ್ನಿಸಿದ 64 ಲಕ್ಷರೂ. ಮೌಲ್ಯದ ಚಿನ್ನದ ಬಿಸ್ಕೆಟ್ ವಶ : ಮಹಿಳೆ ಸೆರೆ

ಹೊಸದಿಲ್ಲಿ,ಆ.23: ದುಬೈಯಿಂದ ಹೊಸದಿಲ್ಲಿಗೆ ಬಂದ ಮಹಿಳೆ ಒಳಉಡುಪಿನಲ್ಲಿ ಅಡಗಿಸಿಟ್ಟಿದ್ದ 64 ಲಕ್ಷರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ದಿಲ್ಲಿ ಏರ್ ಇಂಟಲಿಜನ್ಸ್ ಯುನಿಟ್(ಎಯುಐ) ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಜೆಟ್ ಏರ್‌ವೇಸ್ ವಿಮಾನದಲ್ಲಿ ದುಬೈಯಿಂದ ಬಂದ ಹೈದರಾಬಾದ್‌ನ ಫರ್ಹತುನ್ನೀಸಾ ಎಂಬ ಮಹಿಳೆಯನ್ನು ತಪಾಸಣೆ ನಡೆಸಿದಾಗ ಒಳಉಡುಪಿನಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಬಿಸ್ಕೆಟ್‌ಗಳು ಪತ್ತೆಯಾಗಿವೆ. ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ವರದಿಯಾಗಿದೆ.
Next Story





