ಇವರು ಜಪಾನೀ ಸೌದಿ !
ಸೌದಿ ಸಂಸ್ಕೃತಿಗೆ ಮಾರು ಹೋದ ಅಕಿರಾ

ಟೋಕಿಯೋ , ಆ. 23 : ಅರಬ್ ಉಡುಗೆ ತೊಟ್ಟವರನ್ನು ಸಂಶಯದಿಂದ ನೋಡುವಂತಹ ಪರಿಸ್ಥಿತಿ ನಿರ್ಮಿಸಲಾಗಿರುವ ಇಂದಿನ ದಿನಗಳಲ್ಲಿ ಜಪಾನ್ ನ ಅಕಿರಾ ತಕಟೋರಿಯ ವಿಭಿನ್ನವಾಗಿ ಕಾಣುತ್ತಾರೆ. 2014 ರಲ್ಲಿ ಒಮ್ಮೆ ವಿದ್ಯಾರ್ಥಿಗಳ ಸಾಂಸ್ಕೃತಿಕ ವಿನಿಮಯ ಯೋಜನೆಯಡಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಅಕಿರಾ ಅಲ್ಲಿನ ಸಂಸ್ಕೃತಿ ಹಾಗು ಪರಂಪರೆಗೆ ಯಾವ ಪರಿ ಮಾರು ಹೋದರೆಂದರೆ, ಅಲ್ಲಿಂದ ಮರಳಿ ಜಪಾನ್ ಗೆ ಬಂದವರು ಸಂಪೂರ್ಣ ಸೌದಿಯೇ ಆಗಿ ಬಿಟ್ಟರು ! ಅಂದರೆ ಸೌದಿಗಳ ವೇಷ ಭೂಷಣವನ್ನೇ ಪ್ರತಿದಿನ ತೊಡುವುದು, ಅವರ ಆಹಾರವನ್ನೇ ಸೇವಿಸುವುದು ಇತ್ಯಾದಿ ಈಗ ಅಕಿರಾ ಜೀವನದ ಅವಿಭಾಜ್ಯ ಅಂಗವಾಗಿದೆ. ಜಪಾನ್ ಬೀದಿಗಳಲ್ಲಿ ಈ ಸೌದಿ ವೇಷಧಾರಿ ಜಪಾನೀ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಟ್ವಿಟ್ಟರ್ ನಲ್ಲಿ ಸಾಕಷ್ಟು ಸಕ್ರಿಯವಾಗಿರುವ ಅಕಿರಾ ತನ್ನನ್ನು "ಶಮ್ಸ್ ಖಮರ್ ( ಸೂರ್ಯ ಚಂದ್ರ) " ಎಂದೇ ಕರೆಸಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ತನಗೆ ಜಪಾನೀ ' ಸುಶಿ' ಗಿಂತ ಅರಬರ ' ಖಬ್ಸ' ತಿನ್ನುವುದೇ ಇಷ್ಟ ಎಂದು ಹೇಳುತ್ತಾರೆ.
Courtesy : khaleejtimes.com







