ಅಸ್ಲಂ ಹತ್ಯೆ ಪ್ರಕರಣ : ಓರ್ವನ ಬಂಧನ

ಕೋಝಿಕ್ಕೋಡ್, ಆ.23: ಯೂತ್‌ಲೀಗ್ ಕಾರ್ಯಕರ್ತ ಕಾಳಿಯ ಪರಂಬತ್ ಅಸ್ಲಂ ಹತ್ಯೆ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಬಂಧಿತ ವ್ಯಕ್ತಿಯನ್ನು ಕುಟ್ಟು ಯಾನೆ ನಿತಿನ್ ಎಂದು ಗುರುತಿಸಲಾಗಿದ್ದು,ಈತ ಕೊಲೆಕೃತ್ಯವೆಸಗಿದ ಆರೋಪಿಗಳಿಗೆ ಇನ್ನೋವ ಕಾರನ್ನು ಬಾಡಿಗೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ಆರೋಪಿಗಳಿಗೆ ಕಾರನ್ನು ತಲುಪಿಸಿದ್ದ ಯುವಕನನ್ನು ಹಾಗೂ ಆರೋಪಿಗಳೊಂದಿಗೆ ಮದ್ಯಪಾನ ಕೂಟದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಯುವಕನನ್ನೂ ಬಂಧಿಸಲಾಗಿದೆ ಎಂದು ನಿನ್ನೆ ವರದಿಯಾಗಿತ್ತು.
ಆಗಸ್ಟ್ 11 ರಂದು ತುಣೇರಿ ವೆಳ್ಳೂರಿನ ಡಿವೈಎಫ್‌ಐ ಕಾರ್ಯಕರ್ತ ಶಿಬಿ ಎಂಬಾತನನ್ನು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದ್ದ ಅಸ್ಲಂ(22) ತನ್ನ ಮಿತ್ರನೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಇನ್ನೋವ ಕಾರಿನಲ್ಲಿ ಬಂದಿದ್ದ ತಂಡ ತಲವಾರಿನಿಂದ ಕೊಚ್ಚಿಕೊಲೆಗೈದಿತ್ತು ಎಂದು ವರದಿ ತಿಳಿಸಿದೆ.
Next Story





