ಪಡಿಕ್ಕಲ್: ಸುನ್ನಿ ಬಾಲ ಸಂಘದ (ಎಸ್‌ಬಿಎಸ್) ವಾರ್ಷಿಕ ಮಹಾಸಭೆ

ಮಂಗಳೂರು, ಆ.23: ಇಲ್ಲಿನ ಪಡಿಕ್ಕಲ್ ತನ್ವೀರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಸಂಘಟನೆ ಸುನ್ನಿ ಬಾಲ ಸಂಘದ (ಎಸ್‌ಬಿಎಸ್) ವಾರ್ಷಿಕ ಮಹಾಸಭೆಯು ಖತೀಬರಾದ ನಾಸಿರುದ್ದೀನ್ ಮದನಿ ಬಾಳೆಪುಣಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಅಬ್ದುಲ್ ಮಜೀದ್ ಮುಸ್ಲಿಯಾರ್ ಉರ್ಣಿ ಸಭೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ- ನಿಝಾಮುದ್ದೀನ್ ಡಿ.ಜಿ.ಕಟ್ಟೆ, ಉಪಾಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ಫಾಯಿಝ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ರಾನ್, ಜೊತೆ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಅನಾನ್, ಕೋಶಾಧಿಕಾರಿಗಳಾಗಿ ಮುಹಮ್ಮದ್ ಆಶಿಕ್, ಮುಹಮ್ಮದ್ ಅಮೀನ್ ಕಾರ್ಯಕಾರಿ ಸದಸ್ಯರುಗಳಾಗಿ ಸಿರಾಜುದ್ದೀನ್, ಸೌರೂಫ್, ಅಬ್ದುಲ್ ಬಾಸಿತ್ ಹಾಗೂ ಮದ್ರಸ ಮತ್ತು ಎಸ್‌ಬಿಎಸ್ ಉಸ್ತುವಾರಿಯಾಗಿ ಸಿನಾನ್ ಬರೆ ಆಯ್ಕೆಯಾದರು.
ಮುಹಮ್ಮದ್ ಇಮ್ರಾನ್ ಸ್ವಾಗತಿಸಿದರು. ಇಬ್ರಾಹೀಂ ಖಲೀಲ್ ಅನಾನ್ ವಂದಿಸಿದರು.
Next Story





