ಮಂಜೇಶ್ವರ : ಬಸ್‌ನಲ್ಲಿ ಸಾಗಿಸುತ್ತಿದ್ದ 5 ಕೆ.ಜಿ. ಗಾಂಜಾ ಸಹಿತ ಓರ್ವನ ಬಂಧನ
.jpg)
ಮಂಜೇಶ್ವರ, ಆ.23: ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ನಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ 5 ಕೆ.ಜಿ.ಗಾಂಜಾ ಸಹಿತ ಓರ್ವನನ್ನು ಮಂಜೇಶ್ವರ ವಾಮಂಜೂರ್ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡು ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಹ್ಮದ್ (45) ಎಂದು ಗುರುತಿಸಲಾಗಿದೆ.
ಓಣಂ ಹಬ್ಬದ ಹಿನ್ನಲೆಯಲ್ಲಿ ವಾಮಂಜೂರು ಚೆಕ್‌ಪೋಸ್ಟ್ ಬಳಿ ಅಬಕಾರಿ ಪೊಲೀಸರು ವಾಹನ ತಪಾಸಣೆ ಬಿಗಿಗೊಳಿಸಿದ್ದು ಮಂಗಳವಾರ ಸಂಜೆ 4:10 ಸುಮಾರಿಗೆ ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸನ್ನು ತಪಾಸಣೆ ನಡೆಸಿದಾಗ 5 ಕೆ.ಜಿ. ಗಾಂಜಾ ಪತ್ತೆಯಾಗಿದೆ.
ಕಾರ್ಯಾಚರಣೆಯಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಎನ್.ಶಂಕರನ್, ಅಸಿಸ್ಟೆಂಟ್ ರೆನಿ ಫೆರ್ನಾಂಡಿಸ್, ಪ್ರಿವೆಂಟಿವ್ ಆಫೀಸರ್ ಉಮ್ಮರ್ ಕುಟ್ಟಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥ ಆಳ್ವ, ಸುಧೀಶ್, ಸಜಿತ್ ಕಾರ್ಯಾರಣೆಯಲ್ಲಿ ಪಾಲ್ಗೊಂಡಿದ್ದರು.
Next Story





