ಪುತ್ತೂರು: ಬೈಕ್ ಸ್ಕಿಡ್; ಸವಾರನಿಗೆ ಗಾಯ
ಪುತ್ತೂರು, ಆ.23: ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಸಮೀಪದ ಚಾಮುಂಡೇಶ್ವರಿ ದೇವಾಲಯದ ಬಳಿ ಪುತ್ತೂರು ಮುಂಡೂರು ರಸ್ತೆಯಲ್ಲಿ ಬೈಕೊಂದು ಮಗುಚಿ ಬಿದ್ದು ಸವಾರ ಗಾಯಗೊಂಡ ಘಟನೆ ಸೋಮವಾರ ಸಂವಿಸಿದೆ.
ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಭಾಸ್ಕರ ಆಚಾರ್ಯ ಎಂಬವರ ಪುತ್ರ ಪ್ರಕಾಶ್ ಆಚಾರ್ಯ ಗಾಯಗೊಂಡವರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Next Story





