ಬಾಲ್ಯದ ಗುರುವಿಗೆ ಕೊಹ್ಲಿ ಅಭಿನಂದನೆ
ಪೋರ್ಟ್ ಆಫ್ ಸ್ಪೇನ್, ಆ.23: ಈ ವರ್ಷದ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ತನ್ನ ಕೋಚ್ ರಾಜ್ ಕುಮಾರ್ ಶರ್ಮರಿಗೆ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಅಭಿನಂದನೆ ಸಲ್ಲಿಸಿದರು.
ಶರ್ಮರಲ್ಲದೆ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಕೋಚ್ ಬಿಶ್ವೇಶ್ವರ್ ನಂದಿ, ಅಥ್ಲೆಟಿಕ್ಸ್ ಕೋಚ್ ನಾಗಪುರಿ ರಮೇಶ್ ಹಾಗೂ ಬಾಕ್ಸಿಂಗ್ ಕೋಚ್ ಸಾಗರ್ ದಯಾಳ್ ಮಾಲ್‌ರನ್ನು ಈ ವರ್ಷದ ದ್ರೋಣಾಚಾರ್ಯ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸೋಮವಾರ ಆಯ್ಕೆ ಮಾಡಿತ್ತು. ಪ್ರಶಸ್ತಿಯನ್ನು ಆ.29 ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನಿಸಲಿದ್ದಾರೆ.
ರಾಜ್‌ಕುಮಾರ್ ಸರ್‌ಗೆ ಅಭಿನಂದನೆಗಳು. ತೆರೆ ಮರೆಯ ಕಠಿಣ ಶ್ರಮ ಗಮನಕ್ಕೆ ಬರುವುದಿಲ್ಲ. ನೀವು ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
Next Story





