Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಆಂಧ್ರದಲ್ಲಿ ಸಿಂಧುಗೆ ಅಭಿನಂದನೆ

ಆಂಧ್ರದಲ್ಲಿ ಸಿಂಧುಗೆ ಅಭಿನಂದನೆ

ವಾರ್ತಾಭಾರತಿವಾರ್ತಾಭಾರತಿ23 Aug 2016 11:39 PM IST
share
ಆಂಧ್ರದಲ್ಲಿ ಸಿಂಧುಗೆ ಅಭಿನಂದನೆ

ವಿಜಯವಾಡ, ಆ.23: ರಿಯೋ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಪಿ.ವಿ. ಸಿಂಧುಗೆ ಆಂಧ್ರ ಸರಕಾರ ಅಪೂರ್ವ ಸ್ವಾಗತ ನೀಡಿದೆ.

ತೆಲಂಗಾಣ ಸರಕಾರ ಸೋಮವಾರ ಸಿಂಧು ಹಾಗೂ ಅವರ ಕೋಚ್ ಗೋಪಿಚಂದ್‌ರನ್ನು ತೆರೆದ ಬಸ್ಸಿನಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಿತ್ತು. ತೆಲಂಗಾಣ ಸರಕಾರ ಸನ್ಮಾನಿಸಿದ ಮರುದಿನವೇ ಸ್ಪರ್ಧೆಗೆ ಬಿದ್ದವರಂತೆ ಆಂಧ್ರ ಸರಕಾರ ಕೂಡ ಸಿಂಧು ಹಾಗೂ ಅವರ ಕೋಚ್ ಗೋಪಿಚಂದ್‌ರನ್ನು ಗನ್ನಾವರಂ ಏರ್‌ಪೋರ್ಟ್‌ನಿಂದ ಇಂದಿರಾ ಗಾಂಧಿ ಸ್ಟೇಡಿಯಂನ ತನಕ ಶೃಂಗರಿಸಲ್ಪಟ್ಟ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತಂದಿತು. ವಿಜಯವಾಡ ಮಾರ್ಗದುದ್ದಕ್ಕೂ ನೆರೆದಿದ್ದ ಜನಸ್ತೋಮದತ್ತ ಕೈಬೀಸಿದರು.

ಬಿಳಿಬಟ್ಟೆ ಧರಿಸಿದ್ದ ಸಿಂಧು ಬೆಳ್ಳಿ ಪದಕವನ್ನು ಕೊರಳಿಗೆ ಧರಿಸಿಕೊಂಡು ತನ್ನನ್ನು ಸ್ವಾಗತಿಸಲು ಬಂದಿದ್ದ ತವರಿನ ಅಭಿಮಾನಿಗಳತ್ತ ಕೈಬೀಸಿದರು. ಕೋಚ್ ಗೋಪಿಚಂದ್ ಅಭಿಮಾನಿಗಳತ್ತ ತ್ರಿವರ್ಣ ಧ್ವಜವನ್ನು ಬೀಸಿದರು.

ತೆರೆದ ವಾಹನದಲ್ಲಿ ಬಿಎಐ ಕಾರ್ಯದರ್ಶಿ, ಆಂಧ್ರಪ್ರದೇಶ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಸಿಇಒ ಕೆ. ಪುಣೈಯ್ಯ ಚೌಧರಿ, ಸಿಂಧು ತಂದೆ ಪಿ.ವಿ. ರಮಣ ಉಪಸ್ಥಿತರಿದ್ದರು.

ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸಿಂಧುಗೆ 3 ಕೋಟಿ ರೂ. ಹಾಗೂ 1000 ಚದರ ಅಡಿ ನಿವೇಶನವನ್ನು ಉಡುಗೊರೆಯಾಗಿ ನೀಡಿದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಜಯಿಸಿದ್ದ ಸಿಂಧು ರಿಯೋ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ ವಿಶ್ವದ ನಂ.1 ಆಟಗಾರ್ತಿ ಕ್ಯಾರೊಲಿನಾ ಮರಿನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಸಿಂಧು ನಮ್ಮ ಮಣ್ಣಿನ ಮಗಳು :ನಾಯ್ಡು
 ‘‘ ಸಿಂಧು ತಂದೆ ಊರು ಎಲ್ಲೂರು. ತಾಯಿಯ ಊರು ವಿಜಯವಾಡ. ವಾಲಿಬಾಲ್ ಆಟಗಾರರಾದ ಅವರಿಗೆ ಸಿಂಧು ಅವರ ಯಶಸ್ಸು ಸಲ್ಲಬೇಕು. ಅವರ ಪ್ರೋತ್ಸಾಹದಿಂದಾಗಿ ಸಿಂಧು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಸಿಂಧು ನಮ್ಮ ಮಣ್ಣಿನ ಮಗಳು ಎಂದು ’’ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
 ಸಿಂಧು ತನಗೆ ಆಂಧ್ರ ಪ್ರದೇಶ ಸರಕಾರ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ ಚಿಕ್ಕಂದಿನಲ್ಲಿ ಅಜ್ಜನ ಮನೆಗೆ ಬಂದಾಗ ಆಡಿದ ಕ್ಷಣಗಳನ್ನು ನೆನಪಿಸಿಕೊಂಡರು.
  ‘‘ ಚಿಕ್ಕಂದಿನಲ್ಲಿ ವಿಜಯವಾಡದಲ್ಲಿದ್ದ ಅಜ್ಜನ ಮನೆಗೆ ಆಗಾಗ ಬರುತ್ತಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಶಟ್ಲ್ ಆಡುತ್ತಿದ್ದೆ. ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಗೆ ನಾನು ಚಿರಋಣಿ. ನನ್ನ ಹೆತ್ತವರು ಮತ್ತು ಕೋಚ್ ನೀಡಿದ ಪ್ರೋತ್ಸಾಹದಿಂದಾಗಿ ಈ ಮಟ್ಟಕ್ಕೆ ಬೆಳೆದಿರುವೆ. ನಾನು ಮಗುವಾಗಿದ್ದಾಗ ಗೋಪಿಚಂದ್ ಅವರ ಆಟದ ಪ್ರಭಾವಕ್ಕೊಳಗಾಗಿದ್ದೆ ಎಂದು ಸಿಂಧು ನುಡಿದರು.
ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು ಅವರು ವೇದಿಕೆಯಲ್ಲಿ ಸಿಂಧು ಜೊತೆ ಶಟ್ಲ್ ಆಡುವ ಮೂಲಕ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಂಧು ಅವರನ್ನು ‘‘ಡೈಮಂಡ್’’ ಎಂದು ಬಣ್ಣಿಸಿದ ಮುಖ್ಯ ಮಂತ್ರಿ ನಾಯ್ಡು ಅವರು‘‘ ಸಿಂಧು ಭಾರತದ ಕ್ರೀಡೆಗೆ ಹೊಸ ಚರಿತ್ರೆಯನ್ನು ಬರೆದಿದ್ದಾರೆ. ಅವರು ಇನ್ನು ಮುಂದೆ ಕ್ರೀಡಾ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಲಿದ್ದಾರೆ’’ ಎಂದು ವಿವರಿಸಿದರು.
 ‘‘ ಒಲಿಂಪಿಕ್ ಗೇಮ್ಸ್ ಭಾರತದಲ್ಲಿ ನಡೆದರೆ ಭಾರತದ ಕ್ರೀಡಾ ಕ್ಷೇತ್ರ ಇನ್ನಷ್ಟು ಬೆಳೆಯಲು ಸಾಧ್ಯ. ನಾವು ಯಾರಿಗೂ ಕಡಿಮೆ ಇಲ್ಲ. ಚೀನಾ ಅಥವಾ ರಶ್ಯಕ್ಕಿಂತ ಉತ್ತಮವಾದ ಕ್ರೀಡಾ ಪ್ರತಿಭೆಗಳು ಭಾರತದಲ್ಲಿ ಇದ್ದಾರೆ. ಆಂಧ್ರ ಪ್ರದೇಶ ಸರಕಾರ ಅಮರಾವತಿಯಲ್ಲಿ ಒಲಿಂಪಿಕ್ಸ್‌ನ್ನು ಆಯೋಜಿಸುವ ಉದ್ದೇಶಕ್ಕಾಗಿ ಅಗತ್ಯದ ಸೌಲಭ್ಯಗಳನ್ನು ಕಲ್ಪಿಸುವ ಕಡೆಗೆ ಗಮನ ಹರಿಸಿದೆ. ಆಂಧ್ರಕ್ಕೆ ಒಲಂಪಿಕ್ಸ್ ಗೇಮ್ಸ್ ಆಯೋಜಿಸಲು ಕಷ್ಟವಾಗದು’’ ಎಂದು ನಾಯ್ಡು ಹೇಳಿದರು.
‘‘ ಗೋಪಿ ಚಂದ್ ಅಮರಾವತಿಯಲ್ಲಿ ವಿಶ್ವ ದರ್ಜೆಯ ಅಕಾಡಮಿಯನ್ನು ನಿರ್ಮಿಸುವುದಿದ್ದರೆ ಅಗತ್ಯದ ನೆರವನ್ನು ದಾನಿಗಳಿಂದ ದೊರಕಿಸಿಕೊಡುವುದಾಗಿ ಭರವಸೆ ನೀಡಿದ ಮುಖ್ಯ ಮಂತ್ರಿ ನಾಯ್ಡು ಅವರು ಸರಕಾರ ಸಾಧ್ಯವಿರುವಷ್ಟು ನೆರವು ನೀಡಲಿದೆ ಎಂದರು.
ಆಂಧ್ರ ವಿವಿಯು ಯುವ ಒಲಿಂಪಿಯನ್ ಸಿಂಧು ಅವರ ಕೋಚ್ ಪಿ.ಗೋಪಿಚಂದ್‌ಗೆ ಗೌರವ ಡಾಕ್ಟರೇಟ್ ಪ್ರಕಟಿಸಿದರು.
  ರಿಯೋ ಒಲಿಂಪಿಕ್ಸ್‌ನ ಆರಂಭಿಕ ಸುತ್ತಿನಲ್ಲಿ ನಿರ್ಗಮಿಸಿದ್ದ ಶಟ್ಲರ್ ಗುಂಟೂರಿನ ಕೆ.ಶ್ರೀಕಾಂತ್‌ಗೆ ಮತ್ತು ರಜನಿಗೆ ತಲಾ 25 ಲಕ್ಷ ರೂ. ನಗದು ಪುರಸ್ಕಾರ ಪ್ರಕಟಿಸಿರುವ ನಾಯ್ಡು ಅವರಿಗೆ ಗ್ರೂಪ್-2 ನೌಕರಿ ನೀಡುವುದಾಗಿ ಪ್ರಕಟಿಸಿದ್ದಾರೆ.
ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ , ಗೋಪಿಚಂದ್ ಪತ್ನಿ ಹಾಗೂ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಶ್ರೀಲಕ್ಷ್ಮೀ ಅವರನ್ನು ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸನ್ಮಾನಿಸಿದರು. ಸಿಂಧು ಮತ್ತು ಗೋಪಿಚಂದ್ ವಿಶೇಷ ವಿಮಾನದಲ್ಲಿ ವಿಜಯವಾಡಕ್ಕೆ ಆಗಮಿಸಿದ್ದರು. ಅವರಿಗೆ ಆಂದ್ರ ಪ್ರದೇಶದ ಸಚಿವರು, ಎಂಪಿ ಮತ್ತು ಶಾಸಕರು ೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಿದರು.
,,,,,,,,,,,,,

share
ವಾರ್ತಾಭಾರತಿ
ವಾರ್ತಾಭಾರತಿ
Next Story
X