ಕಾವ್ರಾಡಿ: ನಿವೇಶನ ಹಕ್ಕುಪತ್ರಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಧರಣಿ
ಕುಂದಾಪುರ, ಆ.23: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕಾವ್ರಾಡಿ ಗ್ರಾಪಂ ವ್ಯಾಪ್ತಿಯ ಕಂಡ್ಲೂರು ಹಳ್ನಾಡು ಗ್ರಾಮಗಳ ಮನೆ ನಿವೇಶನ ರಹಿತರು ಕಾವ್ರಾಡಿ ಗ್ರಾಪಂ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ನರಸಿಂಹ ಮಾತನಾಡಿ, ಕಳೆದ 3 ವರ್ಷಗಳಿಂದ ಮನೆ ನಿವೇಶನ ರಹಿತರು ಭೂಮಿ ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದರೂ, ಸರಕಾರ ನಿವೇಶನ ಸ್ಥಳ ಹಕ್ಕುಪತ್ರ ವಿತರಣೆ ಮಾಡದೆ ನಿರ್ಲಕ್ಷ ತೋರುತ್ತಿದೆ ಎಂದು ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿದರು.
ಈ ಕುರಿತ ಮನವಿಯನ್ನು ಗ್ರಾಪಂ ಉಪಾಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಸದಸ್ಯ ಪ್ರಕಾಶ ಚಂದ್ರ ಶೆಟ್ಟಿ, ಪಿಡಿಒ ಗೋಪಾಲ ದೇವಾಡಿಗರಿಗೆ ಸಲ್ಲಿಸಲಾಯಿತು. ಜಿಪಂ ಸದಸ್ಯೆ ಜ್ಯೋತಿ ಎಂ., ಕೃಷಿಕೂಲಿಕಾರರ ಸಂಘದ ಮುಂದಾಳು ನಾಗರತ್ನ ನಾಡ, ಶೀಲಾವತಿ ಪಡುಕೋಣೆ ಉಪಸ್ಥಿತರಿದ್ದರು.
Next Story





