Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಯಾವುದು ದೇಶದ್ರೋಹ, ಯಾವುದು ದೇಶಪ್ರೇಮ?

ಯಾವುದು ದೇಶದ್ರೋಹ, ಯಾವುದು ದೇಶಪ್ರೇಮ?

ಸುರೇಶ್ ಭಟ್, ಬಾಕ್ರಬೈಲ್ಸುರೇಶ್ ಭಟ್, ಬಾಕ್ರಬೈಲ್23 Aug 2016 11:49 PM IST
share

ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ ‘ಕಾಶ್ಮೀರದ ಒಡೆದುಹೋದ ಕುಟುಂಬಗಳು’ ಎಂಬ ವಿಷಯದ ಮೇಲೆ ಬೆಂಗಳೂರಿನ ಕಾಲೇಜೊಂದರಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಆಝಾದಿ’ಯ ಪರ ಮತ್ತು ಸೇನೆಯ ವಿರುದ್ಧ ಘೋಷಣೆಗಳು ಕೇಳಿಬಂದವೆಂದು ಹೇಳಿರುವ ಸಂಘ ಪರಿವಾರ ಆಮ್ನೆಸ್ಟಿ ಸಂಸ್ಥೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಿದೆ. ಕ್ಷಣಮಾತ್ರದಲ್ಲಿ ಐಪಿಸಿ 124-ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ಪೊಲೀಸರು ಇವರ ಒತ್ತಡಕ್ಕೆ ಮಣಿದಿರುವ ಹಾಗಿದೆೆ. ಆದರೆ ಇಷ್ಟರಿಂದಲೇ ತೃಪ್ತಿಯಾಗದ ಸಂಘಪರಿವಾರ ರಾಜ್ಯದಾದ್ಯಂತ ಸರಣಿಯೋಪಾದಿಯಲ್ಲಿ ಪ್ರತಿಭಟನೆ, ಜಾಥಾ, ಧರಣಿ ಇತ್ಯಾದಿಗಳನ್ನು ನಡೆಸುತ್ತಾ ಗಂಟಲು ಹರಿಯುವ ಹಾಗೆ ಕಿರುಚಾಡುತ್ತಿದೆ. ಹಾಗಾದರೆ ಭಾರತದ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಹಲವಾರು ನ್ಯಾಯಾಲಯಗಳು ಈಗಾಗಲೇ ಭಾಷಣ, ಘೋಷಣೆಗಳು ಹಿಂಸೆ, ದೊಂಬಿಗೆ ಪ್ರಚೋದನೆ ನೀಡಿದಾಗಲಷ್ಟೆ ಐಪಿಸಿ 124-ಎ ಅಡಿಯಲ್ಲಿ ದೇಶದ್ರೋಹದ ದೂರು ದಾಖಲಿಸಬಹುದು ಎಂದು ಮತ್ತೆ ಮತ್ತೆ ಹೇಳಿರುವುದಕ್ಕೆ ಯಾವ ಬೆಲೆಯೂ ಇಲ್ಲವೇ? ಇದಕ್ಕೆ ಮುನ್ನ ಇದೇ ಸಂಘಪರಿವಾರ ಫೆಬ್ರವರಿಯಲ್ಲಿ ಜೆಎನ್‌ಯುನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಝಾದಿ ಮತ್ತು ಅಫ್ಝಲ್ ಗುರು ಪರ ಘೋಷಣೆ ಕೂಗಿದವರು ದೇಶದ್ರೋಹಿಗಳೆಂದು ಹೇಳುತ್ತಾ ದೇಶಾದ್ಯಂತ ದಾಂಧಲೆ ನಡೆಸಿತ್ತು. ಮತ್ತೂ ಸ್ವಲ್ಪಹಿಂದೆ ಹೋದರೆ 1986ರ ಡಿಸೆಂಬರ್‌ನಲ್ಲೊಮ್ಮೆ ಜನತಾ ಪಕ್ಷದ ಸಂಸದ ಸೈಯದ್ ಶಹಾಬುದ್ದೀನ್, ಗಣತಂತ್ರ ದಿನವನ್ನು ಬಹಿಷ್ಕರಿಸುವಂತೆ ಕರೆನೀಡಿದಾಗ ಆತ ಕ್ಷಮೆ ಯಾಚಿಸಬೇಕೆಂದು ಇದೇ ರೀತಿ ಆಕಾಶಪಾತಾಳ ಒಂದು ಮಾಡಿತ್ತು. ನಮ್ಮದೇ ರಾಜ್ಯದಲ್ಲಿ ತೀರ್ಥಹಳ್ಳಿಯ ಅಕ್ಷತಾ, ಮಂಡ್ಯದ ಡಿ.ಕೆ.ರವಿ, ಡಿವೈಎಸ್ಪಿ ಅನುಪಮಾ ಶೆಣೈ ಮುಂತಾದ ಪ್ರಕರಣಗಳನ್ನು ಎತ್ತಿಕೊಂಡು ಸುಳ್ಳುಗಳ ಸರಮಾಲೆ ಸೃಷ್ಟಿಸಿ ಅನಗತ್ಯ ಗಲಾಟೆ ಎಬ್ಬಿಸಿತ್ತು. ಇದನ್ನೆಲ್ಲ ನೋಡುವಾಗ ಇವರ ಜಾಯಮಾನವೇ ಹೀಗಿರುವಂತೆ ಕಾಣುತ್ತದೆ. ಅಲ್ಲಿ ಶುದ್ಧ ರಾಜಕಾರಣದ ಗಂಧಗಾಳಿಯೂ ಇರುವಂತೆ ತೋರುತ್ತಿಲ್ಲ. ಇವರ ಅಪಪ್ರಚಾರದ ಭರಾಟೆ ಎಷ್ಟಿದೆಯೆಂದರೆ ಅಮಾಯಕ ಜನರು ಇವರ ಮಾತುಗಳನ್ನು ವೇದವಾಕ್ಯವೆಂದು ಸ್ವೀಕರಿಸುತ್ತಿದ್ದಾರೆಂದು ಅನಿಸುತ್ತ್ತದೆ. ಹೀಗಾಗಿ ಕೆಲವು ವಾಸ್ತವಾಂಶಗಳನ್ನು ಜನರ ಮುಂದಿಡಬೇಕಾಗಿದೆ.

ಇದೇ ಸಂಘಪರಿವಾರದ ಒಂದು ಸಂಘಟನೆಯಾದ ಅಖಿಲ ಭಾರತ ಹಿಂದೂ ಮಹಾಸಭಾದ ನಾಯಕರು ಮೊನ್ನೆ ಆಗಸ್ಟ್ 14ನ್ನು ಕಪ್ಪು ದಿನವಾಗಿ ಆಚರಿಸಿದ್ದಾರೆ. ಮೀರತ್‌ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಅವರು ಕರಿಪತಾಕೆ ಪ್ರದರ್ಶಿಸಿದರಲ್ಲದೆ ಸಂವಿಧಾನದ ಜಾತ್ಯತೀತ ವೌಲ್ಯಗಳ ವಿರುದ್ಧ ಘೋಷಣೆ ಕೂಗಿದರು. ಸದರಿ ಸಂಘಟನೆ ಕಳೆದ 69 ವರ್ಷಗಳಿಂದ ಇದನ್ನು ಸತತವಾಗಿ ಮಾಡುತ್ತಾ ಬರುತ್ತಿದೆಯಲ್ಲದೆ ಜನವರಿ 26ರ ಗಣತಂತ್ರ ದಿನವನ್ನೂ ಕಪ್ಪು ದಿನವಾಗಿ ಕಳೆದ 66 ವರ್ಷಗಳಿಂದ ಆಚರಿ ಸುತ್ತಾ ಬಂದಿದೆ. ಇದೇ ತಂಡ ಜನವರಿ 30ರಂದು ಡೋಲು ಬಾರಿಸುತ್ತ, ಕುಣಿಯುತ್ತ ಗಾಂಧಿ ಹತ್ಯೆಯನ್ನೂ ಸಂಭ್ರಮದಿಂದ ಆಚರಿಸುತ್ತದೆ. 2014ರ ಡಿಸೆಂಬರ್‌ನಲ್ಲಿ ಇವರು ಗಾಂಧಿ ಹಂತಕ ಗೋಡ್ಸೆಯ ಮೂರ್ತಿ ಸ್ಥಾಪಿಸಿ ಆತನ ಹೆಸರಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಲೂ ಮುಂದಾಗಿದ್ದರು. ಸಂಘಪರಿವಾರ ಸ್ವಾತಂತ್ರ್ಯ ಹೋರಾಟದಲ್ಲಿ ಇನಿತಾದರೂ ಭಾಗವಹಿಸದೆ ವಸಾಹತುಶಾಹಿ ಬ್ರಿಟಿಷ್ ಸರಕಾರವನ್ನೆ ಬೆಂಬಲಿಸಿದ ಸತ್ಯವೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಆಯೋಗಗಳ ಮೇಲೆ ಆಯೋಗಗಳು ದೃಢಪಡಿಸಿರುವಂತೆ ದೇಶದಲ್ಲಿ ನಡೆದಿರುವ ನೂರಾರು ಕೋಮುಗಲಭೆಗಳನ್ನು ಹುಟ್ಟುಹಾಕಿದವರೂ ಅವರೇ. ಈ ಹಿನ್ನೆಲೆಯಲ್ಲಿ ದೇಶದ್ರೋಹ, ದೇಶಪ್ರೇಮ ಎಂಬ ಎರಡು ಕೆಟಗರಿ ಗಳ ಪೈಕಿ ಸಂಘಪರಿವಾರದವರು ಯಾವುದಕ್ಕೆ ಸೇರುತ್ತಾರೆಂದು ಜನರೇ ನಿರ್ಧರಿಸಬೇಕು. ಸಂವಿಧಾನಬದ್ಧ ಗಣತಂತ್ರವಾದ ನಮ್ಮ ದೇಶದಲ್ಲಿ ಯಾವುದು ದೇಶದ್ರೋಹದ ಕೃತ್ಯ, ಯಾವುದು ಅಲ್ಲವೆಂದು ನಿರ್ಧರಿಸುವ, ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಇಂತಹ ಲಂಗುಲಗಾಮಿಲ್ಲದ ಖಾಸಗಿ ಸಂಘಟನೆಗಳಿಗೆ ಕೊಟ್ಟವರಾರು ಎಂಬುದನ್ನೂ ಜನ ಪ್ರಶ್ನಿಸಬೇಕಾದ ಸಮಯ ಬಂದಿದೆ. ಈ ಸಂದರ್ಭದಲ್ಲಿ ಜವಾಹರ್‌ಲಾಲ್ ನೆಹರೂ ಅಂದು ನೀಡಿದ್ದ ಎಚ್ಚರಿಕೆಯ ಮಾತುಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ‘‘ಅಲ್ಪ ಸಂಖ್ಯಾತರ ಕೋಮುವಾದಕ್ಕಿಂತಲೂ ಬಹುಸಂಖ್ಯಾತರ ಕೋಮುವಾದವೇ ಅತಿ ಹೆಚ್ಚು ಅಪಾಯಕಾರಿ. ಬಹುಸಂಖ್ಯಾತ ಸಮುದಾಯವೊಂದರ ಕೋಮುವಾದವು ರಾಷ್ಟ್ರೀಯವಾದವೆಂದು ಪರಿಗಣಿಸಲ್ಪಡುವ ಪ್ರವೃತ್ತಿ ಇರುತ್ತದೆ’’ ಎಂದಿದ್ದರು ನೆಹರೂ. ಆಮ್ನೆಸ್ಟಿ ಮೇಲೆ ದೇಶದ್ರೋಹದ ಆರೋಪ ಹೊರಿಸುವ ಮಂದಿಯೇ ಗಾಂಧಿ ಹಂತಕರನ್ನು ವೈಭವೀಕರಿಸುವವರು, ಸಂವಿಧಾನವನ್ನು ತಿರಸ್ಕರಿಸುವವರು, ಮನುಸ್ಮತಿಯನ್ನು ಜಾರಿಗೊಳಿಸಲು ಹವಣಿಸುವವರು, ದಲಿತರನ್ನು, ಅಲ್ಪಸಂಖ್ಯಾತರನ್ನು, ಸ್ತ್ರೀಯರನ್ನು ದಮನಿಸುವವರು ಮತ್ತು ಹಿಂದೂ ರಾಷ್ಟ್ರ ಸ್ಥಾಪಿಸಲು ಸಂಚು ಹೂಡುವವರು ಎಂಬುದನ್ನು ಜನರು ಈಗಲಾದರೂ ಅರ್ಥ ಮಾಡಿಕೊಂಡು ಇಂತಹ ಕುಟಿಲತನವನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ.

share
ಸುರೇಶ್ ಭಟ್, ಬಾಕ್ರಬೈಲ್
ಸುರೇಶ್ ಭಟ್, ಬಾಕ್ರಬೈಲ್
Next Story
X