ಖಾನ್ ಗಳ ದಾಖಲೆ ಮುರಿದ ಅಕ್ಷಯ್ ಕುಮಾರ್ ಕಾರುಬಾರು
ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ನಂಬರ್ 1
ಮುಂಬೈ, ಆ.24: ಅಕ್ಷಯ್ ಕುಮಾರ್ ಅಭಿನಯದ ಲೇಟೆಸ್ಟ್ ಸಿನೆಮಾ ‘ರುಸ್ತುಂ’ 100 ಕೋಟಿ ರೂ. ಕ್ಲಬ್ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಅತೀ ಹೆಚ್ಚು ಅಂದರೆ 3,000 ಕೋಟಿಗೂ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಪ್ರಥಮ ನಟನೆಂದು ಹೆಗ್ಗಳಿಕೆ ಪಡೆದಿರುವ ಅಕ್ಷಯ್ ಈ ಮೂಲಕ ಖಾನ್ ಗಳ ದಾಖಲೆ ಮುರಿದಿದ್ದಾರೆ.
ಅಕ್ಷಯ್ ಅವರ ರುಸ್ತುಂ ಸೇರಿದಂತೆ ಇಲ್ಲಿಯ ತನಕ ಅವರ ಅಭಿನಯದ ಚಿತ್ರಗಳ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ 3010 ಕೋಟಿ ರೂ.ನಷ್ಟಾಗಿದೆ ಎಂದು ಕ್ಯಾಚ್ ನ್ಯೂಸ್ ವರದಿಯೊಂದು ತಿಳಿಸಿದೆ.
ತಮ್ಮ 25 ವರ್ಷಗಳ ಚಿತ್ರ ಜೀವನದಲ್ಲಿ ಅಕ್ಷಯ್ ಇಲ್ಲಿಯ ತನಕ 108 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅತ್ತ ಸಲ್ಮಾನ್ ಖಾನ್ ಅವರು ಅಕ್ಷಯ್ ಅವರಿಗಿಂತ ಸ್ವಲ್ಪ ಹಿಂದಿದ್ದು ಅವರ ಒಟ್ಟು 71 ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ 2,928 ಕೋಟಿ ರೂ.ನಷ್ಟಾಗಿದೆ. ತಮ್ಮ ಮುಂದಿನ ಚಿತ್ರ ‘ಟ್ಯೂಬ್ ಲೈಟ್’ ಬಿಡುಗಡೆಯಾದ ನಂತರ ಸಲ್ಮಾನ್ ಬಾಕ್ಸಾಫೀಸ್ ಗಳಿಕೆಯಲ್ಲಿ 3,000 ಕೋಟಿ ರೂ. ದಾಟಬಹುದೆಂದು ಹೇಳಲಾಗಿದೆ.
ಬಾಲಿವುಡ್ ಸೂಪರ್ ಸ್ಟಾರ್ಗಳ ಬಾಕ್ಸಾಫೀಸ್ ಅಂಕಿ ಅಂಶಗಳು ಹೀಗಿವೆ ನೋಡಿ
ಅಕ್ಷಯ್ ಕುಮಾರ್
ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ : 3010 ಕೋಟಿ ರೂ.
ಒಟ್ಟು ಸಿನಿಮಾಗಳು : 108
ಸರಾಸರಿ ಕಲೆಕ್ಷನ್ : 27.87 ಕೋಟಿ ರೂ.
ಸಲ್ಮಾನ್ ಖಾನ್
ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ : 2,928 ಕೋಟಿ ರೂ.
ಒಟ್ಟು ಸಿನಿಮಾಗಳು : 71
ಸರಾಸರಿ ಕಲೆಕ್ಷನ್ : 41.23 ಕೋಟಿ ರೂ.
ಶಾರುಖ್ ಖಾನ್
ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ : 2,100 ಕೋಟಿ ರೂ.
ಒಟ್ಟು ಸಿನಿಮಾಗಳು : 57
ಸರಾಸರಿ ಕಲೆಕ್ಷನ್ : 36.84 ಕೋಟಿ ರೂ.
ಆಮಿರ್ ಖಾನ್
ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ : 1,497 ಕೋಟಿ ರೂ.
ಒಟ್ಟು ಸಿನಿಮಾಗಳು : 39
ಸರಾಸರಿ ಕಲೆಕ್ಷನ್ : 38.40 ಕೋಟಿ ರೂ.