ಕಾಸರಗೋಡು: ಅಕ್ರಮ ಮರಳು ಅಡ್ಡೆಗಳಿಗೆ ದಾಳಿ - 100 ಲೋಡ್ ಮರಳು ವಶಕ್ಕೆ

ಕಾಸರಗೋಡು, ಆ.24: ಅಕ್ರಮ ಮರಳು ಅಡ್ಡೆಗಳಿಗೆ ದಾಳಿ ನಡೆಸಿರುವ ಕಾಸರಗೋಡು ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ನೇತೃತ್ವದ ತಂಡವು ವಿವಿಧೆಡೆಯಿಂದ 100 ಲೋಡ್ ಮರಳನ್ನು ವಶಪಡಿಸಿಕೊಂಡಿದೆ.
ಬುಧವಾರ ಮುಂಜಾನೆ ಕಂದಾಯ ಅಧಿಕಾರಿಗಳು ಈ ಕೇಂದ್ರಗಳಿಗೆ ದಾಳಿ ನಡೆಸಿದ್ದು, ಮಂಜೇಶ್ವರ ಕೊಡ್ಲಮೊಗರು ಎಂಬಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 100 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ತ್ರಿಕ್ಕರಿಪುರ ಮೊದಲಾದ ತಾಲೂಕು ವಲಯಗಳಲ್ಲಿ ಕಂದಾಯ ಅಧಿಕಾರಿಗಳು ದಾಳಿ ನಡೆಸಿದ್ದರು.
ಮಂಜೇಶ್ವರದಲ್ಲಿ ನಡೆದ ದಾಳಿ ಸಂದರ್ಭದಲ್ಲಿ ಉಪ ಜಿಲ್ಲಾಧಿಕಾರಿ ಎನ್. ದೇವಿದಾಸ್, ಗ್ರಾಮಾಧಿಕಾರಿ ಮುಹಮ್ಮದ್ ಕುಂಞಿ, ಆಂಟೋನಿ, ಕಾಸರಗೋಡಿನಲ್ಲಿ ಉಪ ಜಿಲ್ಲಾಧಿಕಾರಿ ಅಬ್ದುಸ್ಸಲಾಂ, ಉಪ ತಹಶೀಲ್ದಾರ್ ಬಿನು ಜೋರ್ಜ್, ಗ್ರಾಮಾಧಿಕಾರಿ ರಮೇಶ್, ಹೊಸದುರ್ಗದಲ್ಲಿ ಹೆಚ್ಚುವರಿ ದಂಡಾಧಿಕಾರಿ ಕೆ.ಅಂಬುಜಾಕ್ಷನ್, ತಹಶೀಲ್ದಾರ್ ನಾರಾಯಣನ್, ಗ್ರಾಮಾಧಿಕಾರಿ ಪ್ರಜೇಶ್, ತ್ರಿಕ್ಕರಿಪುರದಲ್ಲಿ ಎಚ್. ದಿನೇಶನ್, ಬಿ.ರತ್ನಾಕರಂ, ರಾಜೀವನ್, ಮನೋಜ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







