ಪತ್ನಿಗೆ ಉಡುಗೊರೆಯಾಗಿ ಎವರೆಸ್ಟ್ ಹತ್ತಿದ ಸೌದಿ ಪ್ರಜೆ !
ದಮ್ಮಾಂ,ಆ.24: ತನ್ನ 42ನೆ ವಿವಾಹ ವರ್ಷಾಚರಣೆ ಪ್ರಯುಕ್ತ ಪತ್ನಿಗೆ ಉಡುಗೊರೆಯಾಗಿ ಸೌದಿ ಪ್ರಜೆಯೊಬ್ಬ ತನ್ನ ಅರುವತ್ತನೆ ವಯಸ್ಸಿನಲ್ಲಿ ಎವರೆಸ್ಟ್ ಹತ್ತಿರುವ ಕುತೂಹಲಕಾರಿ ಘಟನೆಯೊಂದು ವರದಿಯಾಗಿದೆ.ಸೌದಿ ಪ್ರಜೆ ಅಮದ್ ಅಲ್ಗಾಂದಿ ಎಂಬವರು ತನ್ನ ಪತ್ನಿಗೆ ಆಭರಣವನ್ನೋ ಬಟ್ಟೆಗಳನ್ನೋ ಉಡುಗೊರೆ ನೀಡುವ ಗೋಜಿಗೆ ಹೋಗಲಿಲ್ಲ. ಬದಲಾಗಿ ಎವರಸ್ಟ್ ಹತ್ತುವ ಮೂಲಕ ಅಪೂರ್ವ ಉಡುಗೊರೆಯನ್ನು ಅವರು ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
42 ವರ್ಷದ ಯಶಸ್ವಿ ಸಂತೋಷಕರವಾದ ದಾಂಪತ್ಯಕ್ಕಾಗಿ ಪತ್ನಿಗೆ ಕೃತಜ್ಞತೆ ಅರ್ಪಿಸಲಿಕ್ಕಾಗಿ ಮಂಜು ಮುಸುಕಿದ ಎವರೆಸ್ಟನ್ನು ಹತ್ತಲು ಅವರು ತೀರ್ಮಾನಿಸಿದ್ದರು. ಪರ್ವತಾರೋಹಣದ ವೇಳೆ ಪತ್ನಿ, ಮಕ್ಕಳು, ಮೊಮ್ಮಕ್ಕಳಿಗೆ ಸಂದೇಶವಿರುವ ಮಾತುಗಳನ್ನು ರೆಕಾರ್ಡ್ ಮಾಡಿ ಯುಟ್ಯೂಬ್ನಲ್ಲಿ ಅವರು ಪೋಸ್ಟ್ ಕೂಡ ಮಾಡಿದ್ದಾರೆ.ಅಲ್ಲದೆ ತನ್ನ ಪತ್ನಿಗೆ ಜೊತೆಗೆ ಪ್ರಣಯ ಪತ್ರವನ್ನು ಕೂಡಾ ಕಳುಹಿಸಿದ್ದಾರೆಂದು ವರದಿ ತಿಳಿಸಿದೆ.
Next Story