ಕೇರಳದಲ್ಲಿ ಮೊಬೈಲ್ ಫೋನ್ ತಂತ್ರಜ್ಞಾನ ಕಲಿತು ಊರಿಗೆ ಹೊರಟ ಸೌದಿ ಪ್ರಜೆಗಳು!

ಕೋಟ್ಟಕ್ಕಲ್,ಆ.24: ಕೆಲಸಕಳಕೊಂಡು ಕೇರಳೀಯರು ಊರಿಗೆ ಮರಳುತ್ತಿದ್ದರೆ ಮೊಬೈಲ್ ಫೋನ್ ತಂತ್ರಜ್ಞಾನ ಕಲಿತು ಸೌದಿ ಪ್ರಜೆಗೆಳಾದ ಸಹೋದರರು ಊರಿಗೆ ಹೊರಟು ನಿಂತಿದ್ದಾರೆ. ಸೌದಿಯ ಟೆಕ್ನಿಕಲ್ ಆ್ಯಂಡ್ ವೆಕೇಶನಲ್ ಟ್ರೈನಿಂಗ್ ಕಾರ್ಪೊರೇಶನ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಅಬ್ದುಲ್ಲ ಅಲಿ(36),ಸಹೋದರ ಖುಲೈಫ್ ಮುಹಮ್ಮದ್ ಅಲಿ(19)ಕೋಟ್ಟಕ್ಕಲ್‌ನಲ್ಲಿ ಮೊಬೈಲ್ ತಂತ್ರಜ್ಞಾನ ಕಲಿತು ಊರಿಗೆ ಹೊರಟಿರುವ ವ್ಯಕ್ತಿಗಳಾಗಿದ್ದಾರೆ. ಸೌದಿಯಲ್ಲಿ ಸ್ವದೇಶೀಕರಣ ಭಾರೀ ಪ್ರಗತಿಯಲ್ಲಿರುವುದರಿಂದಾಗಿ ಮೊಬೈಲ್ ಟೆಕ್ನಿಕ್, ಹಾರ್ಡ್‌ವೇರ್, ಸಾಫ್ಟ್‌ವೇರ್ ಕುರಿತು ಜ್ಞಾನ ಸಂಪಾದಿಸಲು ಕಳೆದ ತಿಂಗಳು ಇಪ್ಪತೈದನೆ ತಾರೀಕಿಗೆ ಇವರಿಬ್ಬರೂ ಕೋಟ್ಟಕ್ಕಲ್‌ಗೆ ಬಂದಿದ್ದರು ಎಂದು ವರದಿತಿಳಿಸಿದೆ. ಅಬ್ದುಲ್ಲ ಅಲಿ ಹಲವಾರು ಸಂಸ್ಥೆಗಳನ್ನು ಹೊಂದಿದ್ದಾರೆ. ಇಲೆಕ್ಟ್ರಾನಿಕ್ ಪದವೀಧರ ಆಗಿರುವ ಇವರು ತಮ್ಮ ಸಂಸ್ಥೆಯಲ್ಲಿ ಸ್ಥಳೀಯ ಯುವಕರಿಗೆ ತರಬೇತಿ ನೀಡಲು ಶ್ರಮಿಸಿ ವಿಫಲರಾಗಿದ್ದರು ಎಂದು ವರದಿ ತಿಳಿಸಿದೆ.
Next Story





