Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬುದ್ಧಿವಂತರ ಜಿಲ್ಲೆಯಲ್ಲೂ ಹಿರಿಯ...

ಬುದ್ಧಿವಂತರ ಜಿಲ್ಲೆಯಲ್ಲೂ ಹಿರಿಯ ನಾಗರಿಕರ ಗೋಳು ಕೇಳುವವರಿಲ್ಲ!

ಅನಾಥಾಶ್ರಮಗಳಲ್ಲೂ ಹಣಕೊಟ್ಟರೆ ಪ್ರವೇಶ: ಆರೋಪ

ವಾರ್ತಾಭಾರತಿವಾರ್ತಾಭಾರತಿ24 Aug 2016 3:15 PM IST
share
ಬುದ್ಧಿವಂತರ ಜಿಲ್ಲೆಯಲ್ಲೂ ಹಿರಿಯ ನಾಗರಿಕರ ಗೋಳು ಕೇಳುವವರಿಲ್ಲ!

ಮಂಗಳೂರು, ಆ.24: ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಿರಿಯ ನಾಗರಿಕರ ಬದುಕು ಹಸನಾಗಿಲ್ಲ. ಹೆತ್ತು ಹೊತ್ತು ಶಿಕ್ಷಣ ನೀಡಿ ಸಲಹಿದ ಮಕ್ಕಳೇ ಹೆತ್ತವರಿಗೆ ಮೋಸ ಮಾಡಿ ಆಸ್ತಿಯನ್ನು ಮೋಸದಿಂದ ಕಬಳಿ, ಹೆತ್ತವರನ್ನು ಬೀದಿಪಾಲು ಮಾಡಿರುವ ಪ್ರಕರಣಗಳೂ ಸಾಕಷ್ಟಿವೆ. ಸಂತಸದಿಂದ ಜೀವನ ಸಾಗಿಸಬೇಕಾದ ಮುದಿ ಜೀವಗಳು ತಮ್ಮ ಹಕ್ಕಿಗಾಗಿ ಇಳಿ ವಯಸ್ಸಿನಲ್ಲೂ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ. ಇದು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ಕಾಯ್ದೆ ಕುರಿತಂತೆ ಆಯೋಜಿಸಲಾಗಿದ್ದ ಶಿಬಿರದಲ್ಲಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತದ ಹಿರಿಯ ನಾಗರಿಕರನೇಕರ ಅಸಹನೀಯ ಬದುಕಿನ ಬಗ್ಗೆ ಉಡುಪಿಯ ಡಾ. ರವೀಂದ್ರನಾಥ್ ಶ್ಯಾನುಭೋಗ್ ವೀಡಿಯೊ ಚಿತ್ರಣದ ಮೂಲಕ ವಿವರಿಸುತ್ತಿದ್ದಂತೆಯೇ ಅಲ್ಲಿ ಸೇರಿದ್ದ ಅಧಿಕಾರಿಗಳು ಮಾತ್ರವಲ್ಲದೆ, ಹಿರಿ ಜೀವಿಗಳ ಕಣ್ಣುಗಳು ತೇವಗೊಂಡಿದ್ದವು.

ತಾವೇ ಕೈತುತ್ತು ಕೊಟ್ಟು ಬೆಳೆಸಿದ ಮಕ್ಕಳು ಕೇವಲ ಆಸ್ತಿಗಾಗಿ, ಹೆತ್ತವರನ್ನೇ ಕಡೆಗಣಿಸುವ, ನಿಕೃಷ್ಟವಾಗಿ ಕಾಣುವುದು, ಹೋರಾಟ ನಡೆಸುತ್ತಾ ಇನ್ನೇನು ನ್ಯಾಯ ಸಿಕ್ಕೀತು ಎನ್ನುವಷ್ಟರಲ್ಲಿ ಪ್ರಾಣ ಕಳೆದುಕೊಂಡ ಹಿರಿ ಜೀವಿಗಳ ಕುರಿತಂತೆ ನೂರಾರು ಪ್ರಕರಣಗಳನ್ನು ಉಲ್ಲೇಖಿಸಿ ಡಾ. ರವೀಂದ್ರ ಶ್ಯಾನುಭೋಗ್ ಮಾಹಿತಿ ಒದಗಿಸಿದರು.

ವಿವಿಧ ರೀತಿಯ ಸಮಾಜ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ರವೀಂದ್ರನಾಥ ಶ್ಯಾನುಭೋಗ್, 2007ರ ಹಿರಿಯ ನಾಗರಿಕರ ಕಾಯ್ದೆಯನ್ವಯ ಉಡುಪಿಯ ಸಾವಿತ್ರಮ್ಮ ಎಂಬವರ ಪ್ರಕರಣದೊಂದಿಗೆ ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆರಂಭಿಸಿದ ಹೋರಾಟ ಹಾಗೂ ಆದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಥಮ ಪ್ರಕರಣದಲ್ಲಿ ಸಿಕ್ಕಿದ ನ್ಯಾಯ ಹಾಗೂ ಹಿರಿಯ ನಾಗರಿಕರ ಕಾಯ್ದೆ ಬಗ್ಗೆ ಅರಿವಿನಿಂದಾಗಿ ಬಳಿಕ ಸುಮಾರು 290 ಪ್ರಕರಣಗಳು ತಮ್ಮ ಬಳಿಗೆ ಬಂದಿರುವುದಾಗಿ ಅವರು ಹೇಳಿದರು. ಹಿರಿಯ ನಾಗರಿಕರ ಹಿತರಕ್ಷಣೆಯ ನಿಟ್ಟಿನಲ್ಲಿರುವ ಈ ಕಾಯ್ದೆಯಡಿ ಹಿರಿಯ ನಾಗರಿಕರ ಆಸ್ತಿ ಕಬಳಿಸಿದ್ದರೆ ಅದನ್ನು ಹಿಂತಿರುಗಿಸುವಲ್ಲಿ, ಬ್ಯಾಂಕ್ ಠೇವಣಿಯನ್ನು ಹಿಂತಿರುಗಿಸುವಲ್ಲಿ, ಮನೆಯಿಂದ ಹೊರಗೆ ಹಾಕಿದ್ದರೆ ಆ ಮನೆಯ ಹಕ್ಕು ಒದಗಿಸುವುದು ಅಥವಾ ವೃದ್ಧಾಶ್ರಮದಲ್ಲಿ ಸಂತಸದ ಬದುಕು ಒದಗಿಸುವಲ್ಲಿ ತಾಲೂಕು ಸಹಾಯಕ ಆಯುಕ್ತರೇ ಖುದ್ದಾಗಿ ವಿಶೇಷ ಅಧಿಕಾರವನ್ನು ಉಪಯೋಗಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಈಗಾಗಲೇ ತುಮಕೂರು, ಉಡುಪಿ, ಬೆಂಗಳೂರು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಸಹಾಯಕ ಆಯುಕ್ತರವರು ಇಂತಹ ದಿಟ್ಟ ಹೆಜ್ಜೆಗಳನ್ನು ಇರಿಸಿ, ಕ್ರಮ ಕೈಗೊಂಡಿರುವ ಉದಾಹರಣೆಗಳೂ ಇವೆ ಎಂದು ಡಾ. ರವೀಂದ್ರನಾಥ್ ಶ್ಯಾನುಭೋಗ್ ತಿಳಿಸಿದರು.

ಬಳೆಗಾರ ಕುಟುಂಬದ ಗಿರಿಜಕ್ಕನ ಪ್ರಕರಣವೇ ವಿಶೇಷ!

ಬಳೆಗಾರ ಕುಟುಂಬದವರಾಗಿರುವ ಪ್ರಸ್ತುತ 72ರ ಹರೆಯದ ಗಿರಿಜಕ್ಕ ಬಳೆ ಮಾರಿಕೊಂಡೇ ಸುಮಾರು 2 ಲಕ್ಷ ರೂ.ಗಳನ್ನು ಸಂಪಾದಿಸಿ ಅದನ್ನು ಸೊಸೈಟಿಯೊಂದರಲ್ಲಿ ಇರಿಸಿದ್ದರು. ಮಕ್ಕಳೇ ಇಲ್ಲದ ಹಿರಿ ಜೀವಿಗೆ ಪರಿಚಿತರಾದ ಟ್ರಕ್ ಚಾಲಕನೊಬ್ಬ ಜೀವನಪರ್ಯಂತ ಸಾಕುವ ಭರವಸೆಯೊಂದಿಗೆ ಸೊಸೈಟಿಯಲ್ಲಿ ಗಿರಿಜಮ್ಮ ಇರಿಸಿದ್ದ ಹಣವನ್ನು ಪಡೆದುದಲ್ಲದೆ, ಗಿರಿಜಮ್ಮನವರ ಮನೆಯನ್ನೂ ತನ್ನದಾಗಿಸಿಕೊಂಡು ಬಿಟ್ಟ. ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವರ್ಷಗಳ ಹಿಂದೆ ಗಿರಿಜಮ್ಮನ ಪರವಾಗಿ ತೀರ್ಪು ಬಂದಿದ್ದರೂ ಆದೇಶವನ್ನು ಅನುಷ್ಠಾನ ಮಾಡಲು ಸಾಧ್ಯವಾಗದ ಕಾರಣ ಗಿರಿಜಮ್ಮ ಮಾತ್ರ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ. ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂದು ಡಾ. ರವೀಂದ್ರನಾಥ್‌ರರು ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹಾಗೂ ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೇಂದ್ರ ಅವರಿಗೆ ಮನವಿ ಮಾಡಿದರು.
 
ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ನಾಗರಿಕರ ಪರವಾಗಿ ಮಾತನಾಡಿದ ಪದ್ಮನಾಭ ಉಳ್ಳಾಲ, ಜಿಲ್ಲೆಯಲ್ಲಿರುವ ಹಿರಿಯ ನಾಗರಿಕರ ಸಂಘಟನೆಗೆ ಇಂತಹ ಪ್ರಕರಣಗಳನ್ನು ನೀಡಿದ್ದಲ್ಲಿ ನ್ಯಾಯದ ಹೋರಾಟದಲ್ಲಿ ತಾವೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲೆಯಲ್ಲಿ ಅನಾಥ ಹಿರಿಯ ನಾಗರಿಕರಿಗೆ ಪೂರಕವಾದ ವ್ಯವಸ್ಥೆ ಇಲ್ಲ. ಸಾಕಷ್ಟು ಆಶ್ರಮಗಳಿದ್ದರೂ ಹಣಕೊಟ್ಟರೆ ಮಾತ್ರ ಪ್ರವೇಶ ಸಿಗುತ್ತದೆ ಎಂಬ ಆರೋಪಗಳು ಸಭೆಯಲ್ಲಿ ವ್ಯಕ್ತವಾಯಿತು.

ಸಮಾಜ ಸೇವಕಿಯರಾದ ಒಲಿಂಡಾ ಪಿರೇರಾ, ನಂದಾ ಪಾಯಸ್, ಕಮಲಾ, ವಿಶ್ವಾಸ್ ಟ್ರಸ್ಟ್ ಹೆಲ್ಪ್‌ಲೈನ್‌ನ ಪ್ರತಿನಿಧಿ ಮಾತನಾಡಿ, ಹಿರಿಯ ನಾಗರಿಕರ ಅಸಹಾಯಕತೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂದಾಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಿರಿಯ ನಾಗರಿಕರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕೆಂಬ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.

ದ.ಕ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ನಾಗರಿಕರ ಸಮಿತಿ ರಚನೆ ಕುರಿತಂತೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಒಂದು ತಿಂಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಣ್ಮುಚ್ಚುವ ವೇಳೆಗಾದರೂ ನ್ಯಾಯ ದೊರಕಲಿ!

ಪ್ರಮೀಳಾ ಮೀರಾರ್ಜಕರ್ ಎಂಬವರು ಬೆಂಗಳೂರಿನಲ್ಲಿದ್ದ ತಮ್ಮ ಮನೆಯಿಂದ ಮಂಗಳೂರಿನಲ್ಲಿರುವ ಹಿರಿಯ ಪುತ್ರನ ಮನೆಗೆ ಬಂದು ನೆಲೆಸಿದ್ದರು. ಈ ಸಂದರ್ಭ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಎರಡನೆ ಮಗ ಆಕಸ್ಮಿಕ ಮರಣದ ದು:ಖದಲ್ಲಿರುವಾಗಲೇ ಮೂರನೆ ಮಗ ಬೆಂಗಳೂರಿನಲ್ಲಿದ್ದ ಪ್ರಮೀಳಾರವರ ಮನೆಯನ್ನು ತನ್ನದಾಗಿಸಿಕೊಂಡುಬಿಟ್ಟ. ಈ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ನಾಗರಿಕರ ಕಾಯ್ದೆಯಡಿ ಹೋರಾಟ ನಡೆಸಿ ತೀರ್ಪು ಅವರ ಪರ ದೊರಕಿ ಮೂರು ವರ್ಷಗಳಾದರೂ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಸಫಲವಾಗದ ಕಾರಣ ಇನ್ನೂ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಹೆತ್ತ ತಾಯಿಯ ಪರಿಯನ್ನು ಡಾ. ರವೀಂದ್ರನಾಥ ಶ್ಯಾನುಭೋಗರು ಸಭೆಯಲ್ಲಿ ವಿವರಿಸಿದರು.

ಶಿಬಿರದ ಬಳಿಕ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ 80ರ ಹರೆಯದ ಪ್ರಮೀಳಾ ಮೀರಾರ್ಜಕರ್,‘‘ಈ ಹರೆಯದಲ್ಲೂ ನನ್ನ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ನನಗೆ ಕಣ್ಮುಚ್ಚುವ ವೇಳೆಗಾದರೂ ನ್ಯಾಯ ದೊರಕುವುದೆಂಬ ಕಾತರದಲ್ಲಿದ್ದೇನೆ’’ ಎನ್ನುತ್ತಾ ಭಾವುಕರಾಗಿಬಿಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X