ಪಾರಿವಾಳ ಕದ್ದನೆಂದು ಆರೋಪಿಸಲ್ಪಟ್ಟು ಥಳಿತಕ್ಕೊಳಗಾದ ವ್ಯಕ್ತಿ ಮೃತ್ಯು
.jpg)
ಬೆಂಗಳೂರು,ಆ.24: ಪಾರಿವಾಳ ಕದ್ದನೆಂದು ಆರೋಪಿಸಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದ ಕೇರಳದ ಮೂಲದ ಯುವಕ ಬೆಂಗಳೂರಿನಲ್ಲಿ ಮೃತನಾಗಿದ್ದಾನೆ ಎಂದು ವರದಿಯಾಗಿದೆ . ಪೆರಂಬಾವೂರ್‌ನ ಜೀವನ್ ಟೋನಿ (19) ಮೈಸೂರಿನ ಶ್ರೀರಂಗಪಟ್ಟಣದಲ್ಲಿ ತಂಡದಿಂದ ಥಳಿತಕ್ಕೊಳಗಾಗಿದ್ದು, ಕಳೆದ ಇಪ್ಪತ್ತು ದಿವಸಗಳಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಜೀವನ್ ಟೋನಿಯ ಕುಟುಂಬ ಕೇರಳದ ಪೆರುಂಬಾವೂರ್‌ನಿಂದ ವಲಸೆ ಬಂದು ಶ್ರೀರಂಗಪಟ್ಟಣದಲ್ಲಿ ವಾಸಿಸುತ್ತಿದೆ.
ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದ ಜೀವನ್ ಟೋನಿ ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತನಾಗಿದ್ದ. ಜೀವನಟೋನಿ ಕೆಲಸ ಮಾಡುತ್ತಿದ್ದಲ್ಲಿಗೆ ಬಂದಿದ್ದ ಪಾರಿವಾಳಕ್ಕೆ ಆಹಾರ ಕೊಟ್ಟ ನಂತರ ಗೂಡಿನೊಳಗೆ ಆತ ಬಂಧಿಸಿಟ್ಟಿದ್ದ. ಆನಂತರ ಅಲ್ಲಿಗೆ ಬಂದಿದ್ದ ಪಾರಿವಾಳದ ಮಾಲಕರು ಎಂದು ಹೇಳುತ್ತಿದ್ದವರಿಗೆ ಅದನ್ನು ಆತನ ನೀಡಿದ್ದ. ಇದಾಗಿ ಕೆಲವು ದಿವಸಗಳ ನಂತರ ಯುವಕರ ತಂಡವೊಂದು ಜೀವನ್ ಟೋನಿ ಪಾರಿವಾಳ ಕದ್ದಿದ್ದಾನೆಂದು ಆರೋಪಿಸಿ ಮಾರಣಾಂತಿಕವಾಗಿ ಆತನಿಗೆ ಹಲ್ಲೆ ನಡೆಸಿತ್ತು ಎಂದು ವರದಿಯಾಗಿದೆ.





