ಮಾಣಿ: ಜುಗಾರಿ ಅಡ್ಡೆಗೆ ದಾಳಿ
ಬಂಟ್ವಾಳ, ಆ. 24: ಮಾಣಿ ಸಂತೆ ಬಳಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು 5 ಮಂದಿ ಆರೋಪಿಗಳನ್ನು ಹಾಗೂ 1,930 ರೂ. ವಶಕ್ಕೆ ಪಡೆದ ಘಟನೆ ಬುಧವಾರ ರಾತ್ರಿ ನಡೆಯಿತು.
ಮಾಣಿ ನಿವಾಸಿಗಳಾದ ಮುತ್ತಬೈರ(38), ಸೀನಪ್ಪ ಗೌಡ(60), ಕಡೇಶ್ವಾಲ್ಯ ನಿವಾಸಿ ಸುರೇಂದ್ರ ನಾಯ್ಕ(32), ಬರಿಮಾರು ನಿವಾಸಿ ಮೋಹನದಾಸ(29), ಪೆರಾಜೆ ನಿವಾಸಿ ಜಿನ್ನಪ್ಪ ಪೂಜಾರಿ(57) ಬಂಧಿತ ಆರೋಪಿಗಳಾಗಿದ್ದಾರೆ.
ಮಾಣಿ ಸಂತೆಯ ಬಳಿಯಲ್ಲಿ ಜುಗಾರಿ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ ದಾಳಿ ನಡೆಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯಾದ ಜಯಕುಮಾರ್, ರಕ್ಷಿತ್ ರೈ, ರಮೇಶ್, ಹರಿಶ್ಚಂದ್ರ, ಶ್ರೀಧರ್, ಪ್ರವೀಣ್ ಕುಮಾರ್, ಲೋಕೇಶ್, ಚಾಲಕ ರಾಘುರಾಮ ಹೆಗಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Next Story





