ಭಾರತ-ಫಿಜಿ ವಿಮಾನಯಾನ
ಒಪ್ಪಂದಕ್ಕೆ ಸಂಪುಟ ಸಮ್ಮತಿ
ಹೊಸದಿಲ್ಲಿ, ಆ.24: ಭಾರತ ಮತ್ತು ಫಿಜಿಯ ನಡುವಣ ಹೊಸ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಂಪುಟವಿಂದು ಅನುಮೋದನೆ ನೀಡಿದೆ. ಇದರಿಂದಾಗಿ ಭಾರತೀಯ ವಿಮಾನ ಸಂಸ್ಥೆಗಳು ದ್ವೀಪ ರಾಷ್ಟ್ರ ಫಿಜಿಯ ಯಾವುದೇ ಕೇಂದ್ರಕ್ಕೂ ವಿಮಾನ ಹಾರಾಟ ನಡೆಸಲು ಅವಕಾಶವಾಗಲಿದೆ.
ಈ ಒಪ್ಪಂದವು 1974ರ ಜನವರಿಯಲ್ಲಿ ಮಾಡಿಕೊಂಡಿರುವ ಒಡಂಬಡಿಕೆಯ ಪರಿಷ್ಕರಣೆಯಾಗಿದೆ. ಎರಡು ದೇಶಗಳೊಳಗೆ ವಿಮಾನ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಇತ್ತೀಚಿನ ಐಸಿಎಒ ಅನ್ವಯ ಒಪ್ಪಂದದ ನವೀಕರಣ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಇದಕ್ಕೆ ಅನುಮೋದನೆ ನೀಡಿದೆ.
Next Story





