ಬೈಕ್ ಢಿಕ್ಕಿ: ಇಬರಿಗೆ ಗಾಯ
ಉಪ್ಪಿನಂಗಡಿ, ಆ.24: ಪಾದಚಾರಿ ಯುವಕನೋರ್ವನಿಗೆ ಬೈಕ್ ಢಿಕ್ಕಿಯಾದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆಯಿಂದ ಬೈಕ್ ಸವಾರನಾದ ಇಳಂತಿಲ ಗ್ರಾಮದ ಬನ್ನೆಂಗಳ ನಿವಾಸಿ ಚಿತ್ರ ಕುಮಾರ್ (24) ಹಾಗೂ ಕಲ್ಲೇರಿಯ ಮುಹಮ್ಮದ್ ಕಬೀರ್(22) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಲ್ಲಿ ರಾತ್ರಿ ಚಿತ್ರ ಕುಮಾರ್‌ಉಪ್ಪಿನಂಗಡಿ ಕಡೆಯಿಂದ ಬನ್ನೆಂಗಳಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ನಡೆದುಕೊಂಡು ಬರುತ್ತಿದ್ದ ಕಬೀರ್‌ಗೆ ಬೈಕ್ ಢಿಕ್ಕಿಯಾಗಿದೆ. ಕಬೀರ್ ಸೇರಿದಂತೆ ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟ ಚಿತ್ರಕುಮಾರ್ ಕೂಡಾ ಘಟನೆಯಿಂದ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





