ಪುರಸಭಾ ಸದಸ್ಯರಿಂದ ಬೆದರಿಕೆ ಆರೋಪ
ಮೂಡುಬಿದಿರೆ, ಆ.24: ಗುತ್ತಿಗೆ ದಾರನಿಗೆ ಬೆದರಿಕೆಯೊಡ್ಡಿದ ಆರೋಪ ದಲ್ಲಿ ಇಲ್ಲಿನ ಪುರಸಭೆ ಸದಸ್ಯ ರತ್ನಾಕರ ದೇವಾಡಿಗ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರಸಭೆಗೆ ಹೊರಗುತ್ತಿಗೆ ಕಾರ್ಮಿಕ ರನ್ನು ಪೂರೈಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರದ ಗುತ್ತಿಗೆದಾರನಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಇಲ್ಲಿನ ಪುರಸಭೆ ಸದಸ್ಯ ರತ್ನಾಕರ ದೇವಾಡಿಗ ವಿರುದ್ಧ ಮೂಡುಬಿದಿರೆ ಪೊಲೀಸರು ದಲಿತ ದೌರ್ಜನ್ಯ ಕೇಸು ದಾಖಲಿಸಿದ್ದಾರೆ. ಪೊಲೀಸ್ ಎಫ್‌ಐಆರ್ ವಿರುದ್ಧ ರತ್ನಾಕರ ದೇವಾಡಿಗ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿದು ಬಂದಿದೆ.
Next Story





